ಸರ್ಕಾರಿ ಜಾಗಕ್ಕಾಗಿ ಎರಡು ಗ್ರಾಮಗಳ ನಡುವೆ ಕಲಹ


30-07-2018 227

ಚಿಕ್ಕಮಗಳೂರು: ಸರ್ಕಾರಿ ಭೂಮಿಗಾಗಿ‌ ಎರಡು ಗ್ರಾಮಗಳ ನಡುವೆ ಕಲಹ ಉಂಟಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಆಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳುವಾರೆ ಗ್ರಾಮದಲ್ಲಿ ಘಟನೆ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎರಡೂ ಗ್ರಾಮಸ್ಥರ ನಡುವಿನ ಜಗಳ. ಸುಮಾರು 30ವರ್ಷದಿಂದ ಹೋರಾಟ ಮಾಡಿದ ಭೂಮಿ ನಮಗೆ ಬೇಕು ಎಂದು ಸ್ಥಳದಲ್ಲಿಯೇ ಗುಡಿಸಲು ಹಾಕಿಕೊಂಡು ಮುಳುವಾರೆ ಗ್ರಾಮಸ್ಥರು ಬೀಡುಬಿಟ್ಟಿದ್ದು, ಮಹಿಳೆಯರ ಮಕ್ಕಳ ಜೊತೆ ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಅದೇ ಜಾಗದಲ್ಲಿ ನಿವೇಶನಕ್ಕಾಗಿ ಪಟ್ಟು ಹಿಡಿದಿರುವ ಪಕ್ಕದ ಕೆಸರಿಕೆ ಗ್ರಾಮದ ಜನರೂ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಲ್ದೂರು ಪೊಲೀಸರು ಗುಡಿಸಲು ತೆರವುಗೊಳಿಸಿದ್ದಾರೆ. ಎರಡೂ ಗ್ರಾಮಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

gram panchayath Land ಜಗಳ ನಿವೇಶನ