ಚರ್ಕಳಂ ಅಬ್ದುಲ್ಲ ಅವರನ್ನು ಸ್ಮರಿಸಿದ ಎಸ್.ಜಿ.ಸಿದ್ದರಾಮಯ್ಯ


28-07-2018 283

ಬೆಂಗಳೂರು: ಕಾಸರಗೋಡಿನ ಚರ್ಕಳಂ ಅಬ್ದುಲ್ಲ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಚರ್ಕಳಂ ಅಬ್ದುಲ್ಲ ಅವರು ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ 1987ರಲ್ಲಿ ಆಯ್ಕೆಯಾಗಿದ್ದರು. ಮೊಟ್ಟ ಮೊದಲಿಗೆ ಕೇರಳ ವಿಧಾನಸಭೆಯಲ್ಲಿ ಕನ್ನಡದ ಧ್ವನಿ ಮೊಳಗಿಸಿದ ಹೆಮ್ಮೆಯ ಕನ್ನಡಿಗರು. ಕಾಸರಗೋಡಿನಲ್ಲಿ ಕನ್ನಡ ಇವತ್ತಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದರೆ ಅದು ಚರ್ಕಳಂ ಅಬ್ದುಲ್ಲ ಅಂತಹವರ ಹೋರಾಟದ ಫಲವಾಗಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕಾದ ಸಂಗತಿ. ಸಚಿವರಾಗಿ,  ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಜನಪರ ಸೇವೆಯಿಂದ ಎಲ್ಲರಿಗೂ ಬೇಕಾದವರಾಗಿದ್ದ ಚರ್ಕಳಂ ಅಬ್ದುಲ್ಲರವರು ಜನಪ್ರತಿನಿಧಿಯೊಬ್ಬರು ಸಾರ್ವಜನಿಕ ಕ್ಷೇತ್ರದಲ್ಲಿ ಯಾವ ರೀತಿ ಇರಬೇಕೆನ್ನುವುದಕ್ಕೆ ಮಾದರಿಯಂತಿದ್ದರು ಎಂದು ಸ್ಮರಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ