ಈ ಪಾಪಿ ತಂದೆಗೆ 5 ವರ್ಷ ಕಾರಾಗೃಹ ಶಿಕ್ಷೆ


27-07-2018 319

ಬೆಂಗಳೂರು: ಅಪ್ರಾಪ್ತ ವಯಸ್ಸಿನ 14ವರ್ಷದ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ತಂದೆಗೆ ನಗರದ ಸಿಟಿ ಸಿವಿಲ್ ಸೇಷನ್ಸ್ ನ್ಯಾಯಾಲಯವು 5 ವರ್ಷಗಳ ಕಾರಗೃಹ ಶಿಕ್ಷೆ 10 ಸಾವಿರ ದಂಡ ವಿಧಿಸಿದೆ. ಹನುಮಂತನಗರದ ಕೂಲಿ ಕಾರ್ಮಿಕ ರವಿ ಅಲಿಯಾಸ್ ರವಿಕುಮಾರ್‍ ಗೆ ನಗರದ ಸಿಟಿ ಸಿವಿಲ್ ಸೆಷನ್ಸ್-54ನೇ ನ್ಯಾಯಾಲಯದ ನ್ಯಾಯಮೂರ್ತಿಗಳು  5 ವರ್ಷಗಳ ಕಾರಗೃಹ ಶಿಕ್ಷೆ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಪರಾಧಿ ಸುಮಾರು 2 ವರ್ಷಗಳಿಂದ ತನ್ನ 14ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಪತಿ ರವಿ ವಿರುದ್ದ ಪತ್ನಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಹನುಮಂತನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಕಲಂ 354(ಎ)(1) ಐಪಿಸಿ ಮತ್ತು ಕಲಂ 8,12 ಪೋಕ್ಸೋ ಆಕ್ಟ್-2012 ರೀತ್ಯಾ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ನಂತರ ತನಿಖಾ ಸಮಯದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಧೀಶರು ವಿಚಾರಣೆ ನಡೆಸಿ, 5 ವರ್ಷಗಳ ಕಾರಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ  ಚಿನ್ನ ವೆಂಕಟರಮಣಪ್ಪ ವಾದ ಮಂಡಿಸಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rape court ದೋಷಾರೋಪಣೆ ಸಾಕ್ಷ್ಯಾಧಾರ