‘ಸರ್ಕಾರ ಸುಮ್ಮನೆ ಕೂತಿಲ್ಲ’ ಬಿಜೆಪಿಗೆ ಡಿಕೆಶಿ ಟಾಂಗ್


25-07-2018 321

ಬೆಂಗಳೂರು: 'ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯವರನ್ನು ಎಐಸಿಸಿ ತೀರ್ಮಾನಿಸಿದೆ. ರಾಹುಲ್ ಗಾಂಧಿಯವರು ತಾವು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಹೇಳಿದ್ದಾರೆ ಎಂದೇಳಲಾಗುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅವರು ಹೀಗೆ ಹೇಳಿರಬಹುದು. ಆದರೆ, ಅವರೇ ನಮ್ಮ ನಾಯಕರು, ಅವರೇ ಮುಂದಿನ ಪ್ರಧಾನಿ ಆಗಬೇಕು ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ ‘ದೇಶದ ಹಿತದೃಷ್ಟಿಯಿಂದ ಗಾಂಧಿ ಕುಟುಂಬ ತ್ಯಾಗ ಮಾಡಿಕೊಂಡು ಬಂದಿದೆ. ಯುಪಿಎ ಸರ್ಕಾರ ಇದ್ದಾಗಲೇ ಪಿಎಂ ಆಗಬಹುದಿತ್ತು. ಆದರೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಇಬ್ಬರೂ ತ್ಯಾಗ ಮಾಡಿದ್ದಾರೆ. ಲೋಕಸಭೆ ಚುನಾವಣೆ ಗೆಲುವೇ ನಮ್ಮ ಗುರಿ, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದಾರೆ.

ಇನ್ನು ಸಾಲಮನ್ನಾ ಕುರಿತು, ಸಾಲಮನ್ನಾ ನಂತರವೂ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರೆದಿದೆ. ವೈಯುಕ್ತಿಕ ವಿಚಾರಗಳಿಗೂ ಆತ್ಮಹತ್ಯೆ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ಸಮಸ್ಯೆಯಿಂದ ರೈತ ಸತ್ತರೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ. ವೆಹಿಕಲ್ ನಲ್ಲಿ ನಾವು ಹೋಗುತ್ತಿದ್ದಾಗ ನಾವೇ ಅಪಘಾತ ಮಾಡಬೇಕಾಗಿಲ್ಲ ಎದುರುಗಡೆಯವನು ಬಂದು ಅಪಘಾತ ಮಾಡಿದರೂ ಸಾವು ಸಂಭವಿಸಬಹುದು. ಹೀಗಾಗಿ ಎಲ್ಲವೂ ಬೆಳೆ ಸಮಸ್ಯೆ ಇಂದಲೇ ರೈತರ ಆತ್ಮಹತ್ಯೆಗಳಾಗುತ್ತಿವೆ ಅಂತ ಹೇಳಲು ಬರಲ್ಲ. ಇದರ ಬಗ್ಗೆ ವರದಿ ಆಧಾರದ ಮೇಲೆಯೇ ಹೀಗೆ ಮಾತನಾಡುತ್ತಿದ್ದೇನೆ. ವೈಯಕ್ತಿಕ ಆಗಿರಲಿ ಏನೇ ಆಗಿರಲಿ ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಹೇಳಿದರು.

ಸಾಲಮನ್ನಾ ವಿಚಾರದಲ್ಲಿ ಯಡಿಯೂರಪ್ಪನವರಿಗಿದ್ದ ಅನುಮಾನ ಬಗೆಹರಿಸಲು ನಿನ್ನೆ ಬ್ಯಾಂಕರುಗಳ ಸಭೆ ನಡೆಸಿದ್ದಾರೆ. ಸರ್ಕಾರ ಸುಮ್ಮನೆ ಕೂತಿಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

D.K.Shivakumar Farmers ಸಾಲಮನ್ನಾ ಯಡಿಯೂರಪ್ಪ