ಹೆಲ್ಮೆಟ್ ಧರಿಸಿದ್ದರೆ ಬದುಕುಳಿತಿದ್ದ ಈ ವ್ಯಕ್ತಿ


23-07-2018 285

ಬೆಂಗಳೂರು: ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಕೆಟಿಎಂ ಬೈಕ್‍ ಚಾಲನೆ ಮಾಡಿಕೊಂಡು ಬರುತ್ತಿದ್ದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಬಲಿ ತೆಗೆದುಕೊಂಡಿದೆ. ಘಟನೆ ಚಲ್ಲಘಟ್ಟ ಮುಖ್ಯರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಪಾರ್ಟಿ ಮುಗಿಸಿಕೊಂಡು ಪಾನಮತ್ತರಾಗಿ ಹೆಲ್ಮೆಟ್ ಹಾಕದೇ ಅತಿವೇಗವಾಗಿ ಕೆಟಿಎಂ ಬೈಕ್‍ನಲ್ಲಿ ಹೋಗುತ್ತಿದ್ದ ಇಬ್ಬರು ಸ್ನೇಹಿತರು ರಸ್ತೆ ಪಕ್ಕದ ತಡೆಗೋಡೆ ಪೈಪ್‍ಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದಾರೆ.

ಚಲ್ಲಘಟ್ಟದ ಸಾಫ್ಟ್ ವೇರ್ ಎಂಜಿನಿಯರ್ ಪ್ರದೀಪ್(30)ಎಂದು ಮೃತಪಟ್ಟರನ್ನು ಗುರುತಿಸಲಾಗಿದೆ. ಗಾಯಗೊಂಡಿರುವ ಅವರ ಸ್ನೇಹಿತ ಸುಮಿತ್ (33)ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಆಂಧ್ರ ಮೂಲದ ಇವರಿಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ವಾರಾಂತ್ಯದ ಅಂಗವಾಗಿ ಇವರಿಬ್ಬರೂ ಪಾರ್ಟಿಗೆ ಹೋಗಿ ಪಾನಮತ್ತರಾಗಿ ರಾತ್ರಿ 1.30ರ ವೇಳೆ ಮನೆಗೆ ಕೆಟಿಎಂ ಡ್ಯೂಕ್ ಬೈಕ್‍ನಲ್ಲಿ ಇಬ್ಬರೂ ಹೆಲ್ಮೆಟ್ ಹಾಕದೇ ವೇಗವಾಗಿ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಚಲ್ಲಘಟ್ಟ ಮುಖ್ಯರಸ್ತೆಯಲ್ಲಿ ಬೈಕ್ ಆಯತಪ್ಪಿ ತಡೆಗೋಡೆ ಪೈಪ್‍ಗೆ ಡಿಕ್ಕಿ ಕೆಳಗೆ ಬಿದ್ದ ಇಬ್ಬರಲ್ಲಿ ಪ್ರದೀಪ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆ, ಸುಮಂತ್ ಗಾಯಗೊಂಡರು. ಪ್ರಕರಣ ದಾಖಲಿಸಿರುವ ಜೀವನ್ ಭೀಮಾನಗರ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅನುಪಮ್ ಅಗರ್‍ವಾಲ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bike KTM ಅತಿವೇಗ ಎಂಜಿನಿಯರ್