ನಕಲಿ ಚಿನ್ನ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ


21-07-2018 281

ಬೆಂಗಳೂರು: ಹೊಳೆಯಲ್ಲಿ ದೊರೆತ ನಿಧಿಯಲ್ಲಿ ಸುಮಾರು 5 ಕೆಜಿ ಚಿನ್ನ ಸಿಕ್ಕಿದೆ ಎಂದು ನಂಬಿಸುತ್ತಾ ಸ್ವಲ್ಪ ಶುದ್ಧ ಚಿನ್ನ ಕೊಟ್ಟು ನಕಲಿ ಚಿನ್ನ ಮಾರಾಟಕ್ಕೆ ಯತ್ನಿಸಿ 30ಲಕ್ಷ ದೋಚಲು ಯತ್ನಿಸಿದ ಇಬ್ಬರು ಖದೀಮರನ್ನು ವರ್ತಕರು ಹಿಡಿದು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕುರುಬರಹಳ್ಳಿಯ ವರ್ತಕ ಪರಮೇಶ್ ಎಂಬುವವರಿಗೆ ಪರಿಚಯವಾದ ಇಬ್ಬರು ಖದೀಮರು ಕಳೆದ 15 ದಿನಗಳಿಂದಲೂ ವ್ಯಾಪಾರ ಕುದುರಿಸುತ್ತಿದ್ದರು. ಮೊದಲು 5ಕೆಜಿ ಚಿನ್ನ ಇದೆ, ಮೂವತ್ತು ಲಕ್ಷ ಕೊಡಿ ಎಂದು ಮೊದಲು ಕೇಳಿ ಕೊನೆಗೆ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ನಕಲಿ ಚಿನ್ನ ಕೊಟ್ಟು ಹಣ ಪಡೆಯಲು ಬಂದಾಗ ಆ ಇಬ್ಬರು ಖದೀಮರು ಸಿಕ್ಕಿಬಿದ್ದಿದ್ದಾರೆ.

ಬಳಿಕ ವರ್ತಕರಾದ ಪರಮೇಶ್, ವಿನೋದ್, ಲಕ್ಷ್ಮಮ್ಮ ಸೇರಿ ಆರೋಪಿಗಳನ್ನು ಹಿಡಿದು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಖದೀಮರು ಹಿಂದಿ ಮಾತನಾಡುತ್ತಿದ್ದಾರೆ. ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಪರಿಚಯ ಮಾಡಿಕೊಂಡು ಬಳಿಕ ನಮಗೆ ಹೊಳೆಯಲ್ಲಿ ನಿಧಿ ಸಿಕ್ಕಿದೆ ಎಂದು ನಂಬಿಸಿದ್ದಾರೆ. ಬಳಿಕ ಮಾದರಿಗೆ ಸ್ವಲ್ಪ ಚಿನ್ನ ಕೊಟ್ಟು ನಂತರ ನಕಲಿ ಚಿನ್ನ ಕೊಟ್ಟು ಯಾಮಾರಿಸಲು ಬರುವ ಇಂತಹ ಖದೀಮರ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಚಿನ್ನದ ದೋಖಾ ಮಾಡುವ ಗ್ಯಾಂಗ್‍ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Gold rold gold ಅಂಗಡಿ ಖದೀಮ