ರಹಸ್ಯವಾಗಿ ಯುವತಿ ಫೋಟೋ ಕ್ಲಿಕ್ಕಿಸಿದವನಿಗೆ ಬಿತ್ತು ಗೂಸಾ!


20-07-2018 493

ಬೆಂಗಳೂರು: ನಾಗಸಂದ್ರದ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳ ಪೋಟೋವನ್ನು ಮೊಬೈಲ್‍ನಲ್ಲಿ ತೆಗೆದ ಸೆಕ್ಯುರಿಟಿ ಗಾರ್ಡ್‍ಗೆ ಪ್ರಯಾಣಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಧರ್ಮದೇಟು ನೀಡಿ ಒಪ್ಪಿಸಿದ ಒಡಿಶಾ ಮೂಲದ ಸೆಕ್ಯುರಿಟಿ ಗಾರ್ಡ್ ರಾಮಚಂದ್ರನನ್ನು ಬಂಧಿಸಿ ಬಾಗಲಗುಂಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಯು ವಿಚಾರಣೆ ವೇಳೆ ಯುವತಿ ಅಂದವಾಗಿ ಕಾಣಿಸುತ್ತಿದ್ದರಿಂದ ಫೋಟೊ ತೆಗೆದಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ  ಹಲಸೂರಿನಿಂದ ಬಂದಿದ್ದ ಯುವತಿ ತನ್ನ ಸ್ನೇಹಿತೆಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಈ ವೇಳೆ ಆರೋಪಿ ತನ್ನ ಮೊಬೈಲ್‍ನಲ್ಲಿ ಸಂತ್ರಸ್ತೆಯ ಫೋಟೊಗಳನ್ನು ಕ್ಲಿಕ್ಕಿಸಲು ಆರಂಭಿಸಿದ್ದಾನೆ. ಫೋಟೊ ಸೆರೆ ಹಿಡಿಯುವಾಗ ಫ್ಲಾಶ್ ಬಂದ ಕಾರಣ ಯುವತಿಯ ಗಮನಕ್ಕೆ ಬಂದಿದೆ.

ಕೂಡಲೇ ಯುವತಿ ಆತನ ಬಳಿ ಹೋಗಿ ಮೊಬೈಲ್ ನೀಡುವಂತೆ ಕೇಳಿದ್ದಾಳೆ. ಗಾಬರಿಗೊಂಡ ರಾಮಚಂದ್ರ ಅಲ್ಲಿಂದ ಕಾಲ್ಕಿತ್ತ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Photo Metro ಮೊಬೈಲ್ ನಿಲ್ದಾಣ