ಕೆಎಸ್ಆರ್ಟಿಸಿ ಪ್ರಧಾನ ಕಚೇರಿಗೆ ವಿದ್ಯಾರ್ಥಿಗಳ ಮುತ್ತಿಗೆ!


20-07-2018 270

ಕೋಲಾರ: ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆಗೆ ಆಗ್ರಹಿಸಿ ಕೋಲಾರದಲ್ಲಿ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯಿಂದ ಕೆ.ಎಸ್.ಆರ್.ಟಿ.ಸಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾ ನಿರತರನ್ನು ಸಿಬ್ಬಂದಿ ಎಳೆದಾಡಿ, ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಎಸ್.ಎಫ್.ಐ ಮುಖಂಡ ವಾಸುದೇವ ರೆಡ್ಡಿ ಮತ್ತು ಶಿವ ಎಂಬುವರ ಮೇಲೆ ಸಾರಿಗೆ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರತಿಭಟನಾಕಾರರು ಏಕಾಏಕಿ ಕೆ.ಎಸ್.ಆರ್.ಟಿ.ಸಿ ಪ್ರಧಾನ ಕಚೇರಿಗೆ ನುಗ್ಗಲು ಯತ್ನ ಮಾಡುವಾಗ ಗೇಟ್ ಹಾಕಿದ್ದು, ಗೇಟ್ ತೆಗೆಯುವಂತೆ ಒತ್ತಡ ಹಾಕಿದರೂ ಸಾರಿಗೆ ಸಿಬ್ಬಂದಿ ಜಗ್ಗಲಿಲ್ಲ. ಇನ್ನು ಕೆಲಕಾಲ ಕಚೇರಿಗೆ ನುಗ್ಗಲು ಯತ್ನಿಸುತ್ತಲೇ ಇದ್ದು, ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು. ಆದರೆ, ಈ ವೇಳೆ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟು ಬಿಡದ ವಿದ್ಯಾರ್ಥಿಗಳು ಧರಣಿ ಕುಳಿತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

KSRTC SFI ಪ್ರಧಾನ ಕಚೇರಿ ಚಕಮಕಿ