ಶಿಕ್ಷಕರ ನೇಮಕಕ್ಕೆ ಪೋಷಕರ ಒತ್ತಾಯ


19-07-2018 325

ತುಮಕೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲಾ ಮಕ್ಕಳು ಪರದಾಡುವಂತಾಗಿದೆ. ಜಿಲ್ಲೆಯ ಗುಬ್ಬಿ ತಾಲ್ಲೂಕಿನ 'ಗುಬ್ಬಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ'ಗೆ ಶಿಕ್ಷಕರ ನೇಮಕ ಮಾಡುವಂತೆ ಒತ್ತಾಯಿಸಿ ಪೋಷಕರು, ವಿದ್ಯಾರ್ಥಿನಿಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಶಾಲೆ ಆರಂಭವಾದಾಗಿನಿಂದಲೂ ಈ ಶಾಲೆಯಲ್ಲಿ ಕೆಲ ವಿಷಯಗಳಿಗೆ ಶಿಕ್ಷಕರನ್ನು ನೇಮಕ ಮಾಡದೆ ಅಸಡ್ಡೆ ತೋರಿದ್ದಾರೆ. ಇದರಿಂದ ಮಕ್ಕಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈವರೆಗೂ ಸಮಾಜಶಾಸ್ತ್ರ ಹಾಗೂ ಗಣಿತ ವಿಷಯಗಳಿಗೆ ಶಿಕ್ಷಕರಿಲ್ಲ. ಶಿಕ್ಷಕರಿಲ್ಲದೆ ಪಾಠ ಹೇಗೆ ಕಲಿಯುವುದು, ತೇರ್ಗಡೆಯಾಗುವುದು ಹೇಗೆ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. 

ಈ ಕುರಿತಾಗಿ ಶಿಕ್ಷಕರ ನೇಮಕ ಮಾಡುವಂತೆ ಕೇಳಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್.ಡಿ.ಎಂ.ಸಿ) ಅಧ್ಯಕ್ಷರ ಜೊತೆ ಬಿಇಒ ವೆಂಕಟೇಶಪ್ಪರ ಅನುಚಿತವಾಗಿ ವರ್ತಿಸಿದ್ದಾರೆ. ಬಿಇಒ ಅವರ ಅನುಚಿತ ವರ್ತನೆ ಖಂಡಿಸಿ ಕಚೇರಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟಿಸಿ ಕೂಡಲೇ ಶಿಕ್ಷಕರ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Government school teachers ಸಮಾಜ ಶಾಸ್ತ್ರ ಗಣಿತ