ಸಿ ಆರ್ ಪಿ ಎಫ್ ಸಿಬ್ಬಂದಿಯ ಸೇವಾಪುಸ್ತಕ ಕಳವು!


19-07-2018 322

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಿಆರ್‍ಪಿಎಫ್ ಕಚೇರಿಯ 18ಮಂದಿ ಸಿಬ್ಬಂದಿಯ ಕರ್ತವ್ಯ ಸೇವಾ ಪುಸ್ತಕ ಹಾಗೂ ಕಚೇರಿಗೆ ಸಂಬಂಧಿಸಿದ ಮುಖ್ಯ ದಾಖಲೆ ಕಳುವಾಗಿದೆ. ಕಳೆದ ಮೇ 2ರಂದು ಸಿಆರ್ಪಿಎಫ್, ಎಎಸ್‍ಐ ಎಸ್.ರಂಜಿತ್‍ಕುಮಾರ್ ಈ ದಾಖಲೆಗಳೊಂದಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಬಂದಾಗ ಅವರು ತಲೆ ಸುತ್ತು ಬಂದು ಸ್ವಲ್ಪ ಸಮಯ ಪ್ರಜ್ಞಾಹೀನರಾಗಿ ಕೆಳಗೆ ಬಿದ್ದಿದ್ದರು. ಈ ವೇಳೆ ಕಳ್ಳರು ದಾಖಲೆಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದಾಖಲೆಗಳ ಬಗ್ಗೆ ಮಾಹಿತಿ ದೊರೆತರೆ ಉಪ್ಪಾರಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 22942503 ಅಥವಾ ನಿಯಂತ್ರಣ ಕೊಠಡಿ ಸಂಖ್ಯೆ 22943232, 100 ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

CRPF Service Book ದಾಖಲೆ ಕೆಂಪೇಗೌಡ