ಸೆಲ್ಫಿ ಸಾವು: ಇನ್ನೂ ಪತ್ತೆಯಾಗದ ಯುವಕನ ಮೃತ ದೇಹ


18-07-2018 387

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದ ಶಿವು ಎಂಬ ಯುವಕ ನಿನ್ನೆ ಹೇಮಾವತಿ ನದಿ ಬಳಿ ಸೆಲ್ಫಿ ತೆಗೆಯಲು ಹೋಗಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಈತನ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನದಿಯಲ್ಲಿ ಕೊಚ್ಚಿಹೋದ ಯುವಕನ‌ ಶವ ಹುಡಕಿಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಪೋಷಕರು ಮನವಿ ಮಾಡಿದ್ದು, ಪೊಲೀಸರು‌ ಮತ್ತು ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಕ್ಕಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ. ಆದರೂ ಈವರೆಗೂ ಮೃತ ದೇಹ ಪತ್ತೆಯಾಗಿಲ್ಲ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

selfie Hemavathi river ತೀವ್ರ ಶೋಧ ಮೃತ ದೇಹ