ಬಳ್ಳಾರಿ: ತುಂಗಭದ್ರಾ ನದಿ ಪಾತ್ರದ ಜನರಿಗೆ ಎಚ್ಚರಿಕೆ!


18-07-2018 405

ಬಳ್ಳಾರಿ: ಈ ಬಾರಿ ಕರ್ನಾಟಕದ ಮಲೆನಾಡು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿಯು ಸಹ ತುಂಬಿ ಹರಿಯುತ್ತಿದ್ದು, ಈಗಾಗಲೆ ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ತುಂಬಿದೆ. ನದಿ  ಪಾತ್ರದ ಜನರಿಗೆ ಜಲಾಶಯದ ಅಧಿಕಾರಿಗಳು ಪ್ರವಾಹದ ಎಚ್ಚರಿಕೆ ನೀಡಿದ್ದಾರೆ. ತುಂಗಭದ್ರಾ ಅಣೆಕಟ್ಟು1630.04 ಅಡಿ ಭರ್ತಿಯಾದ ಹಿನ್ನೆಲೆ, ನದಿ ಪಾತ್ರದಿಂದ ದೂರ ಉಳಿಯಲು ಮುನ್ಸೂಚನೆ ನೀಡಿದ್ದಾರೆ. 64,825 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದ ಹೊರಹರಿವಿನಿಂದ ಟಬಿ ಡ್ಯಾಂ ತುಂಬುವ ಸಾಧ್ಯತೆ ಇದೆ. ಯಾವುದೇ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದಿಂದ 5ರಿಂದ 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುವ ಸಾಧ್ಯತೆಗಳಿವೆ. ಅಣೆಕಟ್ಟು ಕೆಳಭಾಗದ ನದಿ ಪಾತ್ರದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Tungabhadra River Dam ಮುನ್ನೆಚ್ಚರಿಕೆ ಜಲಾಶಯ