ಏನಿದು ಸೀಡ್ ಬಾಲ್ ಕ್ಯಾಂಪೈನ್ !


29-05-2017 857

ಮೈಸೂರು:- ದೇಶಾದ್ಯಂತ ಬಾರಿ ಸದ್ದು ಮಾಡುತ್ತಿರುವ ಸೀಡ್ ಬಾಲ್ ಕ್ಯಾಂಪೈನ್ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಆರಂಭವಾಗಿದೆ. ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ,  ಹಸಿರು ಚಾಮುಂಡಿ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಸೀಡ್ ಬಾಲ್ ಕ್ಯಾಂಪೈನ್ ಮೂಲಕ ಚಾಮುಂಡಿಬೆಟ್ಟವನ್ನ ಹಸಿರೀಕರಣಗೊಳಿಸುವ ಉದ್ದೇಶದಿಂದ ಕ್ಯಾಂಪೈನ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬೀಜದ ಉಂಡೆ ತಯಾರಿಸಿ ಸಾರ್ವಜನಿಕರ ಮೂಲಕ ಚಾಮುಂಡಿಬೆಟ್ಟವನ್ನ ಹಸಿರೀಕರಣಗೊಳಿಸುವ ಈ ಹಸಿರು ಚಾಮುಂಡಿ ಅಭಿಯಾನಕ್ಕೆ ಇಂದು ಬೆಳಗ್ಗೆ ಸರಳವಾಗಿ ಚಾಲನೆ ನೀಡಲಾಯಿತು. ಜೇಡಿಮಣ್ಣಿನಲ್ಲಿ ಗೊಬ್ಬರ ಸೇರಿಸಿ ಬೀಜಗಳನ್ನ ಇಟ್ಟು ಮಾಡಿದ ಸೀಡ್ ಬಾಲ್ ಗಳನ್ನ ಚಾಮುಂಡಿಬೆಟ್ಟ ಹತ್ತುವ ಸಾರ್ವಜನಿಕರಿಗೆ ನೀಡಿ, ಸಿಡ್ ಬಾಲ್ ಎಸೆದು ಖಾಲಿ ಇರುವ ಬೆಟ್ಟದ ಜಾಗದಲ್ಲಿ ಗಿಡ ಬೆಳೆಸುವುದು ಈ ಕ್ಯಾಂಪೈನ್ ಮೂಲ ಉದ್ದೇಶವಾಗಿದೆ. ದೇಶಾದ್ಯಾಂತ ಎಲ್ಲೆಡೆ ಇದೆ ರೀತಿಯ ಕ್ಯಾಂಪೈನ್ ಆರಂಭವಾಗಿದ್ದು. ಮೈಸೂರಿನಲ್ಲಿ ಆರಂಭವಾಗಿರುವ ಅಭಿಯಾನದಲ್ಲಿ ಭಾಗಿಯಾದ ನೂರಾರು ಸಾರ್ವಜನಿಕರು ಖಾಸಗಿ ಸಂಘ ಸಂಸ್ಥೆಗಳ ಸ್ವಯಂಸೇವಕರು ನೀಡಿದ ಸೀಡ್ ಬಾಲ್ ಗಳನ್ನ ಬೆಟ್ಡದ ಖಾಲಿ ಜಾಗಕ್ಕೆ ಎಸೆದು ಗಿಡ ಬೆಳೆಸಲು ಪರೋಕ್ಷ ಕಾರಣರಾದರು. ಸ್ವಯಂ ಸೇವಕರು ಬೆಟ್ಟದ ಮೆಟ್ಟಿಲುಗಳ ಬಳಿಯೇ ಸಿಡ್ ಬಾಲ್ ಗಳನ್ನ ತಯಾರಿಸಿ ಸುಮಾರು 2000ಕ್ಕು ಹೆಚ್ಚು ಬಿಜ ಉಂಡೆಗಳನ್ನು ಬೆಟ್ಟದ ಮಡಿಲು ಸೇರುವಂತೆ ಮಾಡಿದರು. ಮಳೆಗಾಲದಲ್ಲಿ ಈ ಸೀಡ್ ಬಾಲ್ ಕ್ಯಾಂಪೈನ್ ನಿಂದ 10 ರಲ್ಲಿ 5 ಬಾಲ್ ಗಳಾದರೂ ಗಿಡವಾಗಿ ಬೆಳೆದು ಬೆಟ್ಟ ಇನ್ನಷ್ಟು ಸಮೃದ್ದಿಯಾಗಿ ಕಾಣಲಿದೆ ಎಂಬುದು ಸಂಘ ಸಂಸ್ಥೆಗಳ ಆಶಯವಾಗಿದೆ.


ಒಂದು ಕಮೆಂಟನ್ನು ಬಿಡಿ