ಕೂದಲೆಳೆ ಅಂತರದಲ್ಲಿ ತಪ್ಪಿತು ದೊಡ್ಡ ಅನಾಹುತ!


12-07-2018 332

ಬೆಂಗಳೂರು: ರಾಜಧಾನಿಯಲ್ಲಿ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಎರಡು ವಿಮಾನಗಳು ಮುಖಾಮುಖಿಯಾಗಿ ಸ್ವಲ್ಪದರಲ್ಲೇ ನಡೆಯಬೇಕಿದ್ದ ದೊಡ್ಡ ಅನಾಹುತ ತಪ್ಪಿದೆ. ಕೊಯಮತ್ತೂರಿನಿಂದ ಹೈದರಾಬಾದ್‍ಗೆ ಹೋಗುತ್ತಿದ್ದ ಇಂಡಿಗೋ 6ಇ-779 ಹಾಗೂ ಬೆಂಗಳೂರಿನಿಂದ ಕೊಚ್ಚಿಗೆ ಹಾರಾಟ ಮಾಡುತ್ತಿದ್ದ 6ಇ-6505 ವಿಮಾನ ಮುಖಾಮುಖಿಯಾಗಿವೆ. ಆಕಾಶದಲ್ಲಿದ್ದಾಗ ಕೇವಲ 200 ಅಡಿ ಅಂತರದಲ್ಲಿ ಈ ಘಟನೆ ನಡೆದಿದ್ದು, ಪೈಲಟ್‍ಗಳ ಸಮಯ ಪ್ರಜ್ಞೆಯಿಂದ ಎರಡೂ ವಿಮಾನಗಳು ಡಿಕ್ಕಿ ಹೊಡೆದು ನಡೆಯಬೇಕಿದ್ದ ಘೋರ ದುರಂತ ತಪ್ಪಿದೆ.

ಈ ವೇಳೆ ಎರಡೂ ವಿಮಾನಗಳ ಪೈಲಟ್ ಗಳು ಟಿಸಿಎಎಸ್ ಮೂಲಕ ತಕ್ಷಣವೇ ಎಚ್ಚೆತ್ತುಗೊಂಡಿದ್ದಾರೆ. ಇದರಿಂದ ಡಿಕ್ಕಿ ಹೊಡೆಯುತ್ತಿದ್ದನ್ನು ಪೈಲಟ್ ಗಳು ತಪ್ಪಿಸಿ ಸಾಹಸ ಮೆರೆದಿದ್ದಾರೆ. ಇದನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಕಟಣೆ ಮೂಲಕ ಖಚಿತ ಪಡಿಸಿದೆ.

ಕೊಯಮತ್ತೂರಿನಿಂದ ಬರುತ್ತಿದ್ದ 6ಇ-779 ವಿಮಾನ 27,300 ಅಡಿ ಹಾಗೂ  ಕೊಚ್ಚಿಗೆ ಹೋಗುತ್ತಿದ್ದ  6ಇ -6505 ವಿಮಾನ 27,500 ಅಡಿ ಎತ್ತರಲ್ಲಿದ್ದಾಗ ಮುಖಾಮುಖಿಯಾಗಿದೆ. ಕೊಯಮತ್ತೂರಿನ ವಿಮಾನದಲ್ಲಿ 162 ಪ್ರಯಾಣಿಕರು ಹಾಗೂ ಕೊಚ್ಚಿಗೆ ಹಾರಾಟ ಮಾಡುತ್ತಿದ್ದ ವಿಮಾನದಲ್ಲಿ 166 ಪ್ರಯಾಣಿಕರಿದ್ದರು ಎಂದು ಇಂಡಿಗೋ ಸ್ಪಷ್ಟನೆ ನೀಡಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Flite Hyderabad ಆಕಾಶ ಪೈಲಟ್‍