ಮಹಿಳೆಯೊಂದಿಗೆ ಊಬರ್ ಚಾಲಕನ ದುಂಡಾವರ್ತನೆ


11-07-2018 360

ಬೆಂಗಳೂರು: ಹೆಚ್‍.ಎಸ್.ಆರ್ ಲೇಔಟ್ ನಲ್ಲಿ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಜೊತೆ ಊಬರ್ ಚಾಲಕ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಹೆಚ್‍.ಎಸ್.ಆರ್ ಲೇಔಟ್ ನಿಂದ ಬೆಳ್ಳಂದೂರಿನ ಕಂಪನಿಗೆ ತೆರಳುತ್ತಿದ್ದ ವೇಳೆ ಚಾಲಕ ಮಾರ್ಗ ಬದಲಾವಣೆ ಮಾಡಿದ್ದಾನೆ. ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯ ಜೊತೆ ಅನೂಚಿತವಾಗಿ ವರ್ತಿಸಿದ್ದಾನೆ.

ಈ ಕ್ಷಣವೇ ಟ್ರಿಪ್ ರದ್ದು ಪಡಿಸುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ತನ್ನ ದುಂಡಾವರ್ತನೆ ತೋರಿದ್ದಾನೆ. ಅಲ್ಲದೇ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವರನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ.

ಮಹಿಳಾ ಟೆಖಿ ಊಬರ್ ಕ್ಯಾಬ್ ಕೆಎ 42, ಎ 4692 ಇಟಿಯೋಸ್ ಕಾರಿನಲ್ಲಿ ಕಂಪನಿಗೆ ತೆರಳುತ್ತಿದ್ದರು. ಸದ್ಯ ಟೆಖಿ ಟ್ವಿಟರ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಹಿಂದೆ ಜೀವನ್ ಭೀಮಾನಗರ ಹಾಗೂ ಚಿಕ್ಕಜಾಲದಲ್ಲಿಯೂ ಇಂತಹದ್ದೇ ಎರಡು ಪ್ರಕರಣಗಳು ಬೆಳಕಿಗೆ ಬಂದಿತ್ತು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Uber Driver ದುಂಡಾವರ್ತನೆ women