ವೈದ್ಯರ ನಿರ್ಲಕ್ಷ್ಯ:ರೊಚ್ಚಿಗೆದ್ದ ಸಾರ್ವಜನಿಕರು


07-07-2018 264

ಚಾಮರಾಜನಗರ: ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ವಿರುದ್ಧ ರೊಚ್ಚಿಗೆದ್ದ ರೋಗಿಯ ಸಂಬಂಧಿಕರು ಸೇರಿದಂತೆ, ಸಾರ್ವಜನಿಕರು ಆಸ್ಪತ್ರೆ ಮುಂದೆ ಭಾರೀ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂಭಾಗ ರಸ್ತೆ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕೀಲರಾದ ಪ್ರಸನ್ನ ಎಂಬುವರ ತಮ್ಮ ಒಂದು ವರ್ಷದ ಪುತ್ರ ಕುಮಾರ್ ನನ್ನು ಅನಾರೋಗ್ಯದ ನಿಮಿತ್ತ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ, ಚಿಕಿತ್ಸೆ ನೀಡದೆ ಮಹಿಳಾ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಆಕ್ರೋಶಗೊಂಡ ವಕೀಲರ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಂತೆ ಅವರ ಜೊತೆಗೂಡಿದ ಇತರೆ ರೋಗಿಗಳ ಸಂಬಂಧಿಕರು, ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ವೇಳೇ ಪೊಲೀಸರ ಮತ್ತು ಸಾರ್ಜನಿಕರ ನಡುವೆ ವಾಗ್ವಾದವೂ ನಡೆಯಿತು.  


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

district hospitals Doctors ಸಂಬಂಧಿ ಸಾರ್ವಜನಿಕರು