ಕಳ್ಳನನ್ನು ಬೆನ್ನಟ್ಟಿ ಹಿಡಿದ ಪೇದೆಗೆ ಕೇರಳಕ್ಕೆ ಜಾಲಿ ಟ್ರಿಪ್


06-07-2018 228

ಬೆಂಗಳೂರು: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆಳ್ಳಂದೂರು ಪೊಲೀಸ್ ಠಾಣೆಯ ಪೇದೆಯೊಬ್ಬರು ಬೆನ್ನಟ್ಟಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಕೇರಳದಲ್ಲಿ ಹಾಲಿಡೇ ಪ್ಯಾಕೇಜ್ ಸೇರಿ ಭರ್ಜರಿ ಬಹುಮಾನ ಪಡೆದಿದ್ದಾರೆ.

ಅರುಣ್ (20) ಬಂಧಿತ ಆರೋಪಿಯಾಗಿದ್ದಾನೆ. ಸರ್ಜಾಪುರ ರಸ್ತೆಯ ಬಿಗ್ ಬಜಾರ್ ಬಳಿ ಹನುಮಂತ ಎಂಬುವರು ನಿನ್ನೆ ಮಧ್ಯಾಹ್ನ 2.45ರ ವೇಳೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ 2 ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು, ಮೊಬೈಲ್ ಕಸಿದು ಪರಾರಿಯಾದರು.

ಹನುಮಂತ ಕೂಡಲೇ ರಕ್ಷಣೆಗಾಗಿ ಕೂಗಿದಾಗ ಹತ್ತಿರದಲ್ಲೇ ಗಸ್ತಿನಲ್ಲಿದ್ದ ಬೆಳ್ಳಂದೂರು ಠಾಣೆ ಪೇದೆ ವೆಂಕಟೇಶ್ 4 ಕಿ.ಮೀ.ವರೆಗೆ ಹೋಗಿ ಓರ್ವನನ್ನು ಬೈಕ್‍ನಿಂದ ಡಿಕ್ಕಿ ಹೊಡೆದು ಬೀಳಿಸಿ ಠಾಣೆಗೆ ಕರೆತಂದಿದ್ದಾರೆ. ಆತನನ್ನು ಅರುಣ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

 ವೆಂಕಟೇಶ್ ಅವರ ಕಾರ್ಯಕ್ಷಮತೆ, ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಿಸಿಪಿ ಅಬ್ದುಲ್ ಅಹದ್ ಅವರು 10 ಸಾವಿರ ಬಹುಮಾನ ಘೋಷಿಸಿದ್ದಾರಲ್ಲದೆ ಮುಂದಿನ ನವೆಂಬರ್‍ ನಲ್ಲಿ ವಿವಾಹವಾಗಲಿರುವ ವೆಂಕಟೇಶ್ ಅವರಿಗೆ ಕೇರಳದಲ್ಲಿ ರಜೆ ಆಚರಿಸಲು ಹಾಲಿಡೇ ಪ್ಯಾಕೇಜ್‍ನ್ನು ಬಹುಮಾನವಾಗಿ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Police Constable Trip ಪೇದೆ ಮೊಬೈಲ್