ಓಲಾ ಕ್ಯಾಬ್ ಚಾಲಕನಿಂದ ತಪ್ಪಿಸಿಕೊಂಡ ಯುವತಿ!


05-07-2018 478

ಬೆಂಗಳೂರು: ಮುಂಬಯಿಗೆ ಹೋಗಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಲ್ದಾಣಕ್ಕೆ ಹೊರಟಿದ್ದ ಯುವತಿಯನ್ನು ಓಲಾ ಕ್ಯಾಬ್ ಚಾಲಕ ಬೇರೊಂದು ರಸ್ತೆಯಲ್ಲಿ ಕರೆದೊಯ್ದಿದ್ದು ಯುವತಿಯು ಸಮಯಪ್ರಜ್ಞೆ ತೋರಿ ಪಾರಾಗಿರುವ ಘಟನೆ ಚಿಕ್ಕಜಾಲದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಮುಂಬೈಗೆ ಹೊರಟ್ಟಿದ್ದ ಯುವತಿಯೊಬ್ಬರನ್ನು ವಿಮಾನ ನಿಲ್ದಾಣ ನಿಲ್ದಾಣಕ್ಕೆ ಕರೆದೊಯ್ಯುವುದನ್ನು ಬಿಟ್ಟು ಹೈದ್ರಾಬಾದ್ ರಸ್ತೆಗೆ ಕರೆದೊಯ್ಯುತ್ತಿದ್ದ ಓಲಾ ಕ್ಯಾಬ್ ಚಾಲಕನಿಂದ ತಪ್ಪಿಸಿಕೊಂಡ ಯುವತಿಯು ನೀಡಿದ ದೂರು ದಾಖಲಿಸಿದ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕ್ಯಾಬ್ ಚಾಲಕ ಸುರೇಶ್ (25) ಬಂಧಿತ ಆರೋಪಿಯಾಗಿದ್ದು, ಕುಡಿದ ಮತ್ತಿನಲ್ಲಿ, ಈ ರೀತಿ ಮಾಡಿದ್ದಾಗಿ ಆರೋಪಿಯು ತಿಳಿಸಿದ್ದಾನೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

ನಗರದ ಯುವತಿಯೊಬ್ಬರು ಮುಂಬೈಗೆ ವಿಮಾನದಲ್ಲಿ ಹೋಗಲು ನಿನ್ನೆ ರಾತ್ರಿ 2ರ ವೇಳೆ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಹತ್ತಿಸಿಕೊಂಡ ಆರೋಪಿ ಸುರೇಶ್, ವಿಮಾನ ನಿಲ್ದಾಣ ರಸ್ತೆಯ ಟೋಲ್ ಬಳಿ ವಿಮಾನ ನಿಲ್ದಾಣದ ಕಡೆಗೆ ಹೋಗುವುದನ್ನು ಬಿಟ್ಟು ಹೈದ್ರಾಬಾದ್ ರಸ್ತೆ ಕಡೆ ಕ್ಯಾಬ್‍ನ್ನು ತಿರುಗಿಸಿದ್ದಾನೆ.

ಆತಂಕಗೊಂಡ ಯುವತಿಯು ರಕ್ಷಣೆಗಾಗಿ ಕೂಗಾಡಿದ್ದು, ಭಯಗೊಂಡ ಚಾಲಕ ಸುರೇಶ್, ಕಾರು ನಿಲ್ಲಿಸಿದಾಗ ಇಳಿದ ಯುವತಿಯು ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ola Diver ಆತಂಕ ರಕ್ಷಣೆ