ಎಂ.ಇ.ಎಸ್ ಪುಂಡಾಟಿಕೆಗೆ ಬ್ರೇಕ್ ಹಾಕುವಲ್ಲಿ  ಸರ್ಕಾರ ವಿಫಲ !


27-05-2017 369

ಬೆಳಗಾವಿ :- ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಪುಂಡಾಟಿಕೆ ಹಿನ್ನೆಲೆ ಜಿಲ್ಲಾಧಿಕಾರಿಯಿಂದ ಕಳೆದ ನ. 2,2016ರಂದು ವರದಿ ಸಲ್ಲಿಕೆಯಾಗಿದ್ದು, ವರದಿ ನೀಡಿ 6ತಿಂಗಳು ಕಳೆದ್ರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವರದಿಯು ಸರ್ಕಾರ ಮಟ್ಟದಲ್ಲಿಯೇ ಧೂಳು ತಿನ್ನುತ್ತಾ ಬಿದ್ದಿರುವುದು ತಿಳಿದುಬಂದಿದೆ. ಬೆಳಗಾವಿ ಶಾಸಕರ ಓಟ್ ಬ್ಯಾಂಕ್ ರಾಜಕೀಯಕ್ಕೆ ಮಣಿದ ಸರ್ಕಾರ, ಎಂಇಎಸ್ ಪುಂಡಾಟಿಕೆಗೆ ಬ್ರೇಕ್ ಹಾಕುವಲ್ಲಿ  ಸರ್ಕಾರ ವಿಫಲವಾಗಿದೆ. ಇದೇ ಕಾರಣಕ್ಕೆ ಗಡಿಯಲ್ಲಿ ಪದೇ ಪದೇ ಎಂಇಎಸ್ ಪುಂಡಾಟಿಕೆ ಪ್ರದರ್ಶಿಸುತ್ತಿದೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿರುವ ಪ್ರಮುಖ ಅಂಶಗಳು.
ಮಹಾನಗರ ಪಾಲಿಕೆ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ರಾಜ್ಯದ ಹಿತಾಶಕ್ತಿಗೆ ವಿರುದ್ಧವಾಗಿ ಪಾಲಿಕೆ ನಡೆದುಕೊಳ್ಳುತ್ತಿದೆ. ಮಾಜಿ ಮೇಯರ್ ಸರೀತಾ ಪಾಟೀಲ್,ಉಪಮೇಯರ್ ಸಂಜಯ್ ಸಿಂಧೆ, 8ತಿಂಗಳಲ್ಲಿ ಕೇವಲ 4 ಸಭೆಗಳನ್ನ ನಡೆಸಿ ಜವಾಬ್ದಾರಿ ಮರೆತಿದ್ದಾರೆ. ಆಸ್ತಿ ತೆರಿಗೆ ಪರಿಷ್ಕರಣೆ ಮಾಡದೇ ಕರ್ತವ್ಯ ನಿರ್ವಹಣೆ ವಿಫಲ.
ಎಸ್ ಸಿ-ಎಸ್ ಟಿ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳೆಕೆಯಲ್ಲೂ ಹಿನ್ನೆಡೆಯಾಗಿದ್ದು ರಾಜ್ಯ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಭಾಷಾ ಸೌಹಾರ್ದತೆ ಹಾಳು ಮಾಡಿ, ಭಾಷೆ-ಗಡಿ ವಿಚಾರದಲ್ಲಿ ಪ್ರಚೋದನೆ ಮಾಡುತ್ತಿದ್ದಾರೆ.
ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯೋತ್ಸವದ ವಿರುದ್ಧವಾಗಿ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಿದ್ದು, ಕರ್ನಾಟಕ ಸರ್ಕಾರ,ಕನ್ನಡ ಭಾಷೆ ವಿರುದ್ಧ ಘೋಷಣೆ ಕೂಗಿದೆ. ಮೇಯರ್-ಉಪಮೇಯರ್ ಸೇರಿ 22ಜನ ಪಾಲಿಕೆ ಸದಸ್ಯರು ಇದರಲ್ಲಿ ಭಾಗಿದ್ದು, ಇವರಿಂದ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ ಪ್ರತಿಜ್ಞೆ ಉಲ್ಲಂಘನೆ ಮಾಡಿದ್ದಾರೆ.  ಕರಾಳ ದಿನಾಚರಣೆಯಲ್ಲಿ ಕಲ್ಲು ತೂರಾಟ ನಡೆಸಿ ಶಾಂತಿಭಂಗಕ್ಕೆ ಸಹಕಾರ ನೀಡಿರುವುದು ತಿಳಿದುಬಂದಿದೆ, ಮೇಯರ್ ಸೇರಿ ಎಲ್ಲ ಎಂಇಎಸ್ ಸದಸ್ಯರು ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಲೋಪವೆಸಗಿದ್ದಾರೆ. ಬೆಳಗಾವಿ ಪಾಲಿಕೆ ಕೌನ್ಸಿಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಶಾಂತಿಭಂಗವನ್ನುಂಟು ಮಾಡುತ್ತಿರುವ ಮೇಯರ್,ಉಪಮೇಯರ್,ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.


ಒಂದು ಕಮೆಂಟನ್ನು ಬಿಡಿ