ಕಾಫಿ, ಮೆಣಸುಕಾಳು ಬೆಳೆಗಾರರ ಸಾಲಮನ್ನಾಕ್ಕೆ ಒತ್ತಾಯ


04-07-2018 393

ಮಡಿಕೇರಿ: ನಾಳೆ ರಾಜ್ಯ ಬಜೆಟ್ ಹಿನ್ನೆಲೆ, ಬಜೆಟ್ ನಲ್ಲಿ ಕಾಫಿ ಬೆಳೆಗಾರರ ಸಾಲವನ್ನೂ ಮನ್ನಾ ಮಾಡುವಂತೆ ಒತ್ತಾಯಿಸಿ, ಕಾಫಿ ಬೆಳೆಗಾರರು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ಮಾಡಿದ್ದು, ಇದರಿಂದ ವಿರಾಜಪೇಟೆ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಇನ್ನು ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಅತಿ ವೃಷ್ಟಿಯಿಂದ ಕಂಗೆಟ್ಟಿರುವ ಕಾಳುಮೆಣಸು ಬೆಳೆಗಾರರ ಸಾಲಮನ್ನಾಕ್ಕೂ ಆಗ್ರಹಿಸಿದ್ದಾರೆ. ಕಾಳುಮೆಣಸು ದರ ಕುಸಿತದಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿಯೊಂದಿಗೆ ಕಾಳುಮೆಣಸು ಬೆಳೆಗಾರರ ಸಾಲವನ್ನೂ ಮನ್ನಾ ಮಾಡಲು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

coffee Pepper ಸಾಲಮನ್ನಾ ಬೆಳೆಗಾರ