ಕ್ಷುಲ್ಲಕ ಕಾರಣ: ಯುವತಿ ಮೇಲೆ ಸೂಪರ್ ವೈಸರ್ ಹಲ್ಲೆ


04-07-2018 304

ಚಾಮರಾಜನಗರ: ಗಾರ್ಮೆಂಟ್ಸ್ ನಲ್ಲಿ ಕೆಲಸಮಾಡುತ್ತಿದ್ದ ಯುವತಿಯೊಬ್ಬಳ ಮೇಲೆ ಸೂಪರ್ ವೈಸರ್ ಹಲ್ಲೆ ಮಾಡಿದ್ದು, ಘಟನೆ ಖಂಡಿಸಿ ಗಾರ್ಮೆಂಟ್ಸ್ ನ ಎದುರು ಮಹಿಳಾ ಕಾರ್ಮಿಕರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಚಾಮರಾಜನಗರ ಹೊರವಲಯದಲ್ಲಿರುವ ಗಿರೀಶ್ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ ಮುಂದೆ ಮಹಿಳಾ ಕಾರ್ಮಿಕರು ಧರಣಿ ಕುಳಿತಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ನಿನ್ನೆ ಯುವತಿ ಮೇಲೆ ಗಾರ್ಮೆಂಟ್ಸ್ ನ ಸೂಪರ್ ವೈಸರ್ ಆದ ಮಂಜುನಾಥ್ ಎಂಬುವರು ಹಲ್ಲೆ ಮಾಡಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸೂಪರ್ ವೈಸರ್ ವಿರುದ್ಧ 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಗೆ ಮುತ್ತಿಗೆ ಹಾಕಿದ್ದಾರೆ. ಕೆಲಸಕ್ಕೆ ಒಳಗೆ ತೆರಳದ ಮಹಿಳಾ ಕಾರ್ಮಿಕರು ಹೊರಗೆ ನಿಂತು ಪ್ರತಿಭಟನೆ ನಡೆಸಿದ್ದಾರೆ. ಯುವತಿ ಮೇಲೆ ಹಲ್ಲೆ ನಡೆಸಿರುವ ಸೂಪರ್ ವೈಸರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

garments women worker ಪ್ರತಿಭಟನೆ ಕಾರ್ಮಿಕ