‘ಭ್ರಷ್ಟಾಚಾರ, ಅವ್ಯವಹಾರ ‌ಸಹಿಸುವ ಪ್ರಶ್ನೆಯೇ ಇಲ್ಲ’


03-07-2018 349

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ, ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು ಅವರ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಕೊಪ್ಪಳ ಹಾಗು ರಾಯಚೂರಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಕೂಡ ಸಲ್ಲಿಸಿದೆ. ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ, ಇಲಾಖೆಯಲ್ಲಿ ಯಾವುದನ್ನು ‌ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಕೆರೆ ಸಂಜೀವಿನಿ ಯೋಜನೆಯಡಿ ಹೂಳು ಎತ್ತಲಾಗ್ತಿದೆ. ಇದಕ್ಕೆ ಅನುದಾನದ ಕೊರತೆ ಇಲ್ಲ. ಹೂಳೆತ್ತಿದ ಮಣ್ಣಿಗೆ ಒಳ್ಳೆಯ ಫಲವತ್ತತೆ ಇದೆ, ಆ ಮಣ್ಣನ್ನು ರೈತರು ತಮ್ಮ ಜಮೀನಿಗೆ ಹಾಕಿ ಕೊಳ್ಳಬಹುದು ಎಂದು ಶರಣಪ್ಪ ಮಟ್ಟೂರು ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ