ಶಾಸಕ ಈಶ್ವರ ಖಂಡ್ರೆ ಆಯ್ಕೆ ಪ್ರಶ್ನಿಸಿ ತಕರಾರು ಅರ್ಜಿ!


29-06-2018 593

ಬೀದರ್: ಜಿಲ್ಲೆಯ ಭಾಲ್ಕಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗು ಮಾಜಿ ಸಚಿವ ಈಶ್ವರ ಖಂಡ್ರೆ ಆಯ್ಕೆ ಪ್ರಶ್ನಿಸಿ ಕಲ್ಬುರ್ಗಿ ವಿಭಾಗೀಯ ಪೀಠದಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ಪರಾಜಿತ ಅಭ್ಯರ್ಥಿ ಬಿ.ಎಸ್.ವೈ ಆಪ್ತ ಡಿ.ಕೆ.ಸಿದ್ರಾಮ್ ಈ ಕುರಿತು  ಹೈಕೊರ್ಟ್ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ಆಯ್ಕೆ ಅನುರ್ಜಿತಗೊಳಿಸುವಂತೆ ಮನವಿ ಮಾಡಿದ್ದಾರೆ.  ಚುನಾವಣೆಯಲ್ಲಿ ಅಕ್ರಮ, ಸಚಿವರಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಸೇರಿದಂತೆ 12 ದೂರುಗಳ ಸಮೇತ, ಸುಮಾರು 600 ಪುಟಗಳ ಅರ್ಜಿಯೊಂದಿಗೆ ಅಂದಾಜು 10ಸಾವಿರ ಪುಟಗಳ ಪೂರಕ ದಾಖಲೆಗಳೊಂದಿಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಭಾಲ್ಕಿ ಕ್ಷೇತ್ರದಿಂದ ಪುನರ ಆಯ್ಕೆಯಾಗಿದ್ದಾರೆ. ವಿಧಾನಸಭೆ ಚುನಾವಣೆ ವೇಳೆಯಲ್ಲಿ ಅಕ್ರಮ ಮಾಡಿ ಚುನಾವಣೆಯಲ್ಲಿ ಲ್ಲಿ ಗೆದ್ದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Eshwara Khandre D.K sidram ಚುನಾವಣೆ ಪೌರಾಡಳಿತ