ರಸ್ತೆಯಲ್ಲಿ ಜಾಗ ಬಿಡದಿದ್ದಕ್ಕೆ ಯುವಕನಿಗೆ ಚಾಕು ಇರಿತ!


27-06-2018 453

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಂದರ್ (18 ) ಚಾಕು ಇರಿತಕ್ಕೊಳಗಾದ ಯುವಕ. ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಹಾರ್ನ್ ಮಾಡಿದರೂ ಸೈಡ್ ಬಿಡದಿದ್ದಕ್ಕೆ ಚಾಕುವಿನಿಂದ ಇರಿದಿದ್ದಾರೆ. ನಿನ್ನೆ ರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದ ಸುಂದರ್ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಕಲಾಸಿಪಾಳ್ಯದ ಎಂ.ಎಸ್.ಬಿಲ್ಡಿಂಗ್ ನ್ಯೂ ಎಕ್ಸ್ ಟೆಕ್ಷನ್ ಬಳಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ದ್ವಿಚಕ್ರ ವಾಹನ ಸವಾರ ಹಾರ್ನ್ ಮಾಡುತ್ತಿದ್ದು, ಕಿವಿಗೆ ಇಯರ್ ಫೋನ್ ಹಾಕಿಕೊಂಡದ್ದರಿಂದ ಹಾರ್ನ್ ಶಬ್ದ ಕೇಳಿಸದೆ ಹಾಗೆಯೇ ಮುಂದೆ ಹೋಗುತ್ತಿದ್ದ. ಇದರಿಂದ ಕೋಪಗೊಂಡ  ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಸುಂದರ್ ತೊಡೆಗೆ ಚಾಕುವಿನಿಂದ ಇರಿದಿದ್ದಾನೆ. ಈ ಕುರಿತು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ear phone half Murder ತೊಡೆ ಹಾರ್ನ್