ಸಾರ್ವಜನಿಕರ ಮೇಲೆ ಕಂದಾಯ ಅಧಿಕಾರಿ ದರ್ಪ


26-06-2018 382

ತುಮಕೂರು: ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಕೇಳಲು ಬಂದ ಸಾರ್ವಜನಿಕರ ಮೇಲೆ ಕಂದಾಯ ಅಧಿಕಾರಿಣಿ ದರ್ಪ ತೋರಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಸಂಕೀರ್ಣದ ನಾಡ ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ಕ್ಯೂನಲ್ಲಿ ನಿಂತಿದ್ದವರಿಗೆ ಅವಾಜ್ ಹಾಕಿ ವಾಪಸ್ ಕಳುಹಿಸಿರುವುದಾಗಿಯೂ ತಿಳಿದು ಬಂದಿದೆ.

ಗ್ರೇಡ್-2 ತಹಶೀಲ್ದಾರ್ ಇಂದಿರಾ ಅವರು ಸಾರ್ವಜನಿಕರ ಮೇಲೆ ದರ್ಪ‌ ತೋರಿದ ಅಧಿಕಾರಿ. ತಾಂತ್ರಿಕ ನೆಪವೊಡ್ಡಿ ದಾಖಲೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು, ಈ ಕುರಿತು ಯುವಕನೊಬ್ಬ ಸೌಜನ್ಯದಿಂದ ಕಾರಣ ಕೇಳಿದ್ದಾರೆ. ಇದರಿಂದ ಕೆರಳಿದ ಅಧಿಕಾರಿ ‘ನೀನೇನಾದ್ರೂ ಸಾಫ್ಟ್ ವೇರ್ ಎಂಜಿನಿಯರ್ ಆದ್ರೇ, ಕಂಪ್ಯೂಟರ್ ಸರಿಮಾಡು’. ‘ಬ್ಯಾಂಕ್ ನಲ್ಲಿ‌ ಕ್ಯೂ ನಿಲ್ತೀರ? ಇಲ್ಲಿ ನಿಲ್ಲೋಕೆ ನಿಮಗೇನು’ ಎಂದು ಸಾರ್ವನಿಕರೊಂದಿಗೆ ವಾಗ್ವಾದಕ್ಕಿಳಿದಿದ್ದರು.  ಇಂದಿರಾ ಅವರ ದರ್ಪಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಜನರ ಸೇವೆಗಾಗಿಯೇ ಇರುವಂತಹ ಇಂಥಹ ಅಧಿಕಾರಿಯ ವರ್ತನೆಯನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Tahsildar Computer ಜಾತಿ ಪ್ರಮಾಣ ಪತ್ರ ದಾಖಲೆ