ಜಿ.ಟಿ.ದೇವೇಗೌಡರಿಗೆ ನನ್ನ ಫುಲ್ ಸಪೋರ್ಟ್: ರಾಯರೆಡ್ಡಿ


26-06-2018 541

ಕೊಪ್ಪಳ: ‘ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಇಂಗ್ಲೀಷ್ ನಲ್ಲಿ ಮಾತನಾಡುವ ಅವಶ್ಯಕತೆ ಇಲ್ಲ, ಕನ್ನಡದಲ್ಲಿ ಮಾತನಾಡಬೇಕು’ ಎಂದು, ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು. ಸಚಿವ ಜಿ.ಟಿ‌.ದೇವೇಗೌಡ ಅವರು ಇಂಗ್ಲೀಷ್ ನಲ್ಲಿ ಮಾತನಾಡುವ ವಿಚಾರವಾಗಿ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ ‘ಜಿ.ಟಿ‌.ದೇವೆಗೌಡರಿಗೆ ಇಂಗ್ಲೀಷ್ ಬರಲ್ಲ ಅನ್ನೋ ಮಾತು ಕೇಳಿ ನನಗೆ ಬಹಳ ಬೇಜಾರಾಗಿದೆ‌. ನಾವೇನು ಇಂಗ್ಲೀಷ್ ಗುಲಾಮರಾ’? ಎಂದು ಪ್ರಶ್ನಿಸಿದ್ದಾರೆ. ‌

‘ಜಿ.ಟಿ.ದೇವೇಗೌಡರು ಇಂಗ್ಲೀಷ್ ನಲ್ಲಿ ಮಾತನಾಡಕೂಡದು ಎಂದ ರಾಯರೆಡ್ಡಿ. ಕನ್ನಡ ಮಾತನಾಡಿದರೆ ಕೀಳರಿಮೆ, ಇಂಗ್ಲೀಷ್ ಮಾತನಾಡಿದರೆ ಸುಪೀರಿಯರ್ ಆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ನನಗೆ ಬಹಳ ಕೋಪ ಇದೆ. ನಾನು ಜಿ‌.ಟಿ.ದೇವೆಗೌಡರಿಗೆ ಫುಲ್ ಸಪೋರ್ಟ್ ಮಾಡುತ್ತೇನೆ. ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯ ಭಾಷೆ ಮುಖ್ಯ ಅಲ್ಲ' ಎಂದು ಜಿಟಿಡಿ ವಿರುದ್ಧ ಹೇಳಿಕೆಗಳಿಗೆ ಟಾಂಗ್ ನೀಡಿದ್ದಾರೆ.

'ಜಿ‌.ಟಿ.ದೇವೇಗೌಡ ಸಂವಿಧಾನತ್ಮಕವಾಗಿ ಸರಿ ಇದ್ದಾರೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಸಹ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ ಆಗಲು ಅವಕಾಶವಿದೆ. ವಿದೇಶಿಗರು ಬಂದರೂ ಸಚಿವರು ಕನ್ನಡದಲ್ಲೇ ಮಾತನಾಡಲಿ. ಮಧ್ಯೆ ಭಾಷಾ ತರ್ಜುಮೆ ಮಾಡುವವರನ್ನು ಇಟ್ಟುಕೊಳ್ಳಲಿ' ಎಂದು ಸಲಹೆ ನೀಡಿದ್ದಾರೆ.

ಇದೇ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯುಷ್ಯ ಎಂದು ಹೇಳಿದರು. ‘ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಎರಡೂವರೆ ವರ್ಷ ಏನೂ ಆಗಲ್ಲ‌. ಎರಡು ವರ್ಷದ ನಂತರ ಕೆಲವರ ಮನೋಭಾವ ಬದಲಾಗಬಹುದು. ಅಕಸ್ಮಾತ್ ಏನೂ ಆಗದಿದ್ದರೆ ಸರ್ಕಾರ ಐದು ವರ್ಷ ಪೂರೈಸಲಿದೆ' ಎಂದರು ಬಸವರಾಜ್ ರಾಯರೆಡ್ಡಿ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G.T.Devegowda Basavaraj Rayareddy ಇಂಗ್ಲೀಷ್ ಗುಲಾಮ