ಆರೋಗ್ಯ ತಪಾಸಣೆ: ಬೆಂಗಳೂರಿಗೆ ಸಿದ್ಧಗಂಗಾ ಶ್ರೀಗಳು


21-06-2018 492

ಬೆಂಗಳೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಿಗ್ಗೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ತೆರಳಿದರು. ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋದರು ಶ್ರೀಗಳು. ಕಳೆದ ಜನವರಿಯಲ್ಲಿ ಮೂರು‌ ಸ್ಟೆಂಟ್ ಅಳವಡಿಸಲಾಗಿತ್ತು. ಈಗಾಗಲೆ ಸ್ವಾಮೀಜಿ ದೇಹದೊಳಗೆ ಎಂಟು ಸ್ಟೆಂಟ್ ಅಳವಡಿಸಲಾಗಿದೆ. ಸದ್ಯ ಜನರಲ್ ಚೆಕಪ್ಗಾಗಿ ಆಸ್ಪತ್ರೆಗೆ‌ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾಮೀಜಿ ಆರೋಗ್ಯದ ಕುರಿತು ಮಾತನಾಡಿದ ಡಾ.ರವೀಂದ್ರ ಅವರು, ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು ಹೀಗಾಗಿ ತಪಾಸಣೆಗೆ ಆಸ್ಪತ್ರೆಗೆ ಕರೆತರಲಾಗಿದೆ. ರಕ್ತ ಪರೀಕ್ಷೆ ಸೇರಿದಂತೆ ರೆಗ್ಯುಲರ್ ಚೆಕಪ್ ಮಾಡಲಾಗುವುದು. ರಿಪೋರ್ಟ್ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaganga matha Shivakumara Swami ಆರೋಗ್ಯ ಡಾ.ರವೀಂದ್ರ