ಅತಿಯಾದ ಎಸಿ ಕಾರಣ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ !


26-05-2017 390

ಬೆಂಗಳೂರು:- ವಿಧಾನಸಭೆಯ ಕಲಾಪದ ವೇಳೆ ಅತಿಯಾದ ಹವಾನಿಯಂತ್ರಿತ(ಎಸಿ) ಅಳವಡಿಸಿರುವ ಕಾರಣ ಕಲಾಪದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು, ಮಾಜಿ ಸಚಿವ ಹಾಗೂ ಮಂಡ್ಯ ಶಾಸಕ ಅಂಬರೀಶ್ ಅವರು ಸ್ಪೀಕರ್ ಕೆ.ಬಿ.ಕೋಳಿವಾಡ ಕೇಳಿರುವ ಸ್ಪಷ್ಟನೆಗೆ ನೀಡಿರುವ ಉತ್ತರ ಇದು. ಪದೇ ಪದೇ ಕಲಾಪಕ್ಕೆ ಗೈರು ಹಾಜರಾಗುತ್ತಿರುವ ಅಂಬರೀಶ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ದೂರು ನೀಡಿದ್ದರು. ಈ ದೂರಿನನ್ವಯ ಸ್ಪಷ್ಟನೆ ಕೇಳಿ ಸ್ಪೀಕರ್ ಅವರು ಅಂಬರೀಶ್ ಅವರಿಗೆ ಪತ್ರ ಬರೆದಿದ್ದರು. ಇದೀಗ ಸ್ಪೀಕರ್ ಅವರಿಗೆ ಬರೆದಿರುವ ಪತ್ರಕ್ಕೆ ಉತ್ತರಿಸಿರುವ ರೆಬೆಲ್ ಸ್ಟಾರ್, ನನಗೆ ಅನಾರೋಗ್ಯದ ಕಾರಣ ಎಸಿಯಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲಾಪದ ವೇಳೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ