ಆದಾಯ ತೆರಿಗೆ ಇಲಾಖೆ ದ್ವೇಷ ರಾಜಕಾರಣಕ್ಕೆ ಬಳಕೆ !


26-05-2017 296

ಬೆಂಗಳೂರು :- ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಂಡು ಕಾಂಗ್ರೆಸ್  ಸಚಿವರು, ಹಾಗೂ ಮುಖಂಡರ ಮನೆ ಮೇಲೆ ದಾಳಿ ಮಾಡುವ ತಯಾರಿ ಮಾಡಿಕೊಂಡಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕುಮಾರ ಕೃಪ ಅತಿಥಿ ಗೃಹದಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಜತೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿಗಳು ದ್ವೇಷದ ರಾಜಕಾರಣಕ್ಕಾಗಿ ನಡೆಯುತ್ತಿವೆ, ಎಂದು ಕಿಡಿಕಾರಿದ್ದಾರೆ. ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮನೆಯ ಮೇಲೆ ನೆಪಮಾತ್ರಕ್ಕೆ ದಾಳಿ ಮಾಡಿ ಲೆಕ್ಕಾಚಾರಗಳನ್ನು ಕೊಟ್ಟು ಪ್ರಕರಣವನ್ನು ಮುಗಿಸಲಾಗಿದೆ. ಉಳಿದಂತೆ ನನ್ನನ್ನೂ ಸೇರಿ ಹಲವಾರು ಸಚಿವರು ಹಾಗೂ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೆಲ್ಲಾ ನಮಗೆ ಗೊತ್ತಿದೆ. ಕಾನೂನು ಇದೆ. ಇವರೇನೇ ಅಧಿಕಾರ ದುರುಪಯೋಗ ಪಡಿಸಿಕೊಂಡರೂ ಅದನ್ನು ಎದುರಿಸುವುದು ನಮಗೆ ತಿಳಿದಿದೆ ಎಂದರು.


ಒಂದು ಕಮೆಂಟನ್ನು ಬಿಡಿ