‘ತಪ್ಪಿತಸ್ಥರು ಯಾರೇ ಆಗಲಿ ಕ್ರಮ ಕೈಗೊಳ್ಳಬೇಕು’-ಬಿಎಸ್ ವೈ


16-06-2018 403

ಬೆಂಗಳೂರು: ‘ಒಂದು ವರ್ಷ ಯಾಕೆ 5ವರ್ಷವೂ ಕುಮಾರಸ್ವಾಮಿ ಇರಲಿ, ಅವರದ್ದೇ ಮೈತ್ರಿ ಸರ್ಕಾರ ಇದೆಯಲ್ವಾ' ಎಂದು ಒಂದು ವರ್ಷ ಮೈತ್ರಿ ಸರ್ಕಾರವನ್ನು ಯಾರೂ ಅಲುಗಾಡಿಸಲು ಆಗಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಲೇವಡಿ ಮಾಡಿದ್ದಾರೆ ಬಿ.ಎಸ್ ಯಡಿಯೂರಪ್ಪ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆಯನ್ನು ವ್ಯಂಗ್ಯವಾಡಿದ್ದಾರೆ. ಇನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಹಿಂದೂಪರ ಸಂಘಟನೆಗಳ ಹೆಸರು ಕೇಳಿ ಬರುತ್ತಿರುವ ವಿಚಾರದ ಕುರಿತು, ಅಪರಾಧಿಗಳು ‘ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

 


ಒಂದು ಕಮೆಂಟನ್ನು ಬಿಡಿ