ಬ್ರೇಕ್ ಫೇಲ್: ಪೆಟ್ರೋಲ್ ಬಂಕ್ ಗೆ ನುಗ್ಗಿದ ಬಸ್


12-06-2018 451

ಬೆಂಗಳೂರು: ಗೊರಗುಂಟೆ ಪಾಳ್ಯದ ಬಳಿ ಬೆಳಿಗ್ಗೆ ಚಲಿಸುತಿದ್ದ ವೇಳೆ ಬ್ರೇಕ್ ವೈಫಲ್ಯಗೊಂಡು ಸ್ಟೇರಿಂಗ್ ಲಾಕ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್‍ಟಿಸಿ ಬಸ್ ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಹಾಸನದಿಂದ ಬೆಳಿಗ್ಗೆ 11.30ರ ವೇಳೆ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಮಾರ್ಗ ಮಧ್ಯೆ ಗೊರಗುಂಟೆ ಪಾಳ್ಯದ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯಗೊಂಡು ಸ್ಟೇರಿಂಗ್ ಲಾಕ್ ಆಗಿ ಸ್ಪರ್ಶ್ ಆಸ್ಪತ್ರೆಯ ಬಳಿ ಹೆಚ್‍ಪಿ ಪೆಟ್ರೋಲ್ ಬಂಕ್‍ಗೆ ಏಕಾಏಕಿ ನುಗ್ಗಿದೆ.

ಬಸ್ಸಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಪೆಟ್ರೋಲ್ ಹಾಕುವ ಕ್ಯಾಬಿನ್ ಪೈಪ್ ಲೈನ್, ಕಾಂಪೌಂಡ್ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಸುದ್ದಿ ತಿಳಿದ ತಕ್ಷಣ ಯಶವಂತಪುರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಪೊಲೀಸ್ ಠಾಣೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕ ದೂರು ದಾಖಲಿಸಿ ಅಪಘಾತದಿಂದ ಸುಮಾರು 15ಲಕ್ಷ ಕ್ಕಿಂತ ಹೆಚ್ಚಾಗಿ ನಷ್ಟವಾಗಿದ್ದು ಅದನ್ನು  ಕೆಎಸ್‍ಆರ್‍ಟಿಸಿ ಕೊಡಬೇಕೆಂದು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Break fail KSRTC ಪೈಪ್ ಲೈನ್ ಪ್ರಾಣಾಪಾಯ