ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಹೈಕೋರ್ಟ್


12-06-2018 456

ಬೆಂಗಳೂರು: ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸದೇ ಪ್ರಕರಣ ದಾಖಲಿಸಿ ಬಂಧಿಸಿ, ನಿರಪರಾಧಿಗಳನ್ನು ಜೈಲಿಗೆ ಕಳುಹಿಸಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡುವ ಪೊಲೀಸರಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಯಾವುದೋ ಪ್ರಕರಣಕ್ಕೆ ಇನ್ಯಾರನ್ನೋ ಬಂಧಿಸಿ ಜನಸಾಮಾನ್ಯರಿಗೆ ಪೊಲೀಸರು ಕಿರುಕುಳು ನೀಡುತ್ತಿದ್ದಾರೆ, ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ಈ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಸಾಕ್ಷಿ ಇಲ್ಲ ಎಂದು ಬಿಟ್ಟು ಕಳುಹಿಸಿದ ಉದಾಹರಣೆಗಳಿವೆ. ಆದರೆ ಬಂಧಿಸಿದ ವ್ಯಕ್ತಿಯ ಗೌರವ ಸಮಾಜದಲ್ಲಿ ಏನಾಗಬಹುದು ಎನ್ನುವ ಕಿಂಚಿತ್ತು ಕಾಳಜಿ ಸಹ ಪೊಲೀಸರಿಗೆ ಇರುವುದಿಲ್ಲ. ಹಾಗಾಗಿ ಹೈಕೋರ್ಟ್, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಿದರೆ ನಿಮ್ಮ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಮಂಗಳೂರಿನ ಕೇಸ್ ಒಂದರ ವಿಚಾರಣೆ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ನ್ಯಾಯಾಧೀಶರು ಹೇಳಿದ್ದಾರೆ. ಎಫ್‍ಐಆರ್ ಹಾಕುವಾಗ ಇರುವ ವ್ಯಕ್ತಿಯ ಹೆಸರು ಚಾರ್ಜ್ ಶೀಟ್ ಹಾಕುವಾಗ ಇರೋದಿಲ್ಲ ಇದರಿಂದ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ಗೊತ್ತಾಗುತ್ತದೆ. ಇದರಿಂದ ಆ ವ್ಯಕ್ತಿಯ ಘನತೆ ಸಮಾಜದಲ್ಲಿ ಆತನ ಗೌರವಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಸುಖಾ ಸುಮ್ಮನೆ ಬಂಧನಕ್ಕೊಳಗಾಗಿ ಜೈಲು ಶಿಕ್ಷೆ ಅನುಭವಿಸಿದ್ದಕ್ಕಾಗಿ ಆ ವ್ಯಕ್ತಿಯು ಪರಿಹಾರ ಕೇಳಬಹುದು, ಪೊಲೀಸರ ಮೇಲೆ ಪ್ರಕರಣ ಸಹ ದಾಖಲಿಸಬಹುದು ಎನ್ನುವ ಅಭಿಪ್ರಾಯವನ್ನು ಹಿರಿಯ ವಕೀಲ ಶ್ಯಾಮ್ ಸುಂದರ್ ವ್ಯಕ್ತಪಡಿಸಿದರು.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

FIT ಸಾಕ್ಷಾಧಾರ ಹೈಕೋರ್ಟ್ ಆರೋಪ