‘ಜನರೇ ಟೋಪಿ ಹಾಕಿದ್ದಾರೆ, ನಿನ್ಯಾಕೆ ಈಗ ಹಾಕ್ತೀಯಪ್ಪ'-ಸಿದ್ದರಾಮಯ್ಯ


12-06-2018 459

ಮೈಸೂರು: ‘‘ಜನರೇ ಟೋಪಿ ಹಾಕಿದ್ದಾರೆ, ನಿನ್ಯಾಕೆ ಈಗ ಹಾಕ್ತೀಯಪ್ಪ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರುವುದಕ್ಕೆ ಈ ರೀತಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸನ್ಮಾನ ಮಾಡಲು ಬಂದ ಬೆಂಬಲಿಗನ ಮುಂದೆ ಈ ಮಾತನ್ನು ಹೇಳಿದ್ದಾರೆ.

ವರುಣಾ ಕ್ಷೇತ್ರದ ಜನತೆಗೆ ಕೃತಜ್ಞತೆ ತಿಳಿಸಿಲು ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಚಂದನ್ ಎಂಬ ಅಭಿಮಾನಿ ಸನ್ಮಾನ ಮಾಡಲು ಆಗಮಿಸಿದ್ದರು. ನಿಮಗೆ ಸನ್ಮಾನ ಮಾಡಬೇಕು ಎಂದಾಗ, ಬಾ ಎಂದು ಕೈ ಸನ್ನೆ ಮೂಲಕ ಸೂಚನೆ ನೀಡಿ ಕರೆದಿದ್ದರು. ಶಾಲು ಹೊದಿಸಿ, ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋದಾಗ ‘ಹೇ ಇದೆಲ್ಲ ಯಾಕಪ್ಪ ಎಂದರೂ, ಪೇಟ ತೊಡಿಸುತ್ತಿದ್ದಾಗ ‘ಜನರೇ ಟೋಪಿ ಹಾಕಿದ್ದಾರೆ. ಇದೆಲ್ಲ ಯಾಕಪ್ಪ' ಎಂದು ನಗುತ್ತಲೇ ಮೈಸೂರು ಪೇಟ ತೆಗೆದಿಟ್ಟು ಆಪ್ತರೊಂದಿಗೆ ಮಾತುಕತೆ ನಡೆಸಿದರು. ತಮ್ಮ ಸೋಲಿನ ಕುರಿತು ತಾವೇ ವ್ಯಂಗ್ಯ ಮಾಡಿಕೊಂಡರು ಸಿದ್ದರಾಮಯ್ಯ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah Mysore Peta ಸಂದರ್ಭ ಬೆಂಬಲಿಗ