ರಸ್ತೆಗೆ ಹಾಲು ಸುರಿದು ರೈತರ ಪ್ರತಿಭಟನೆ


11-06-2018 379

ಬೆಳಗಾವಿ: ಮಹಾರಾಷ್ಟ್ರ ಮೂಲದ ಗೋಕುಲ್ ಡೈರಿ ಬೆಳಗಾವಿಯ ಮುಗಳಿ ಗ್ರಾಮದ ರೈತರು ಉತ್ಪಾದಿಸಿದ ಹಾಲನ್ನು ಖರೀದಿಸಲು ನಿರಾಕರಿಸಿದೆ. ಡೈರಿ ಆಡಳಿತ ಮಂಡಳಿಯ ಈ ನಿರ್ಧಾರದಿಂದ ಆಕ್ರೋಶಗೊಂಡಿರುವ ರೈತರು ರಸ್ತೆ ಮೇಲೆ ಹಾಲು ಸುರಿದು ಪ್ರತಿಭಟಿಸಿದ್ದಾರೆ.

ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ರೈತರು ಗೋಕುಲ್ ಡೈರಿಯ ಏಕಾಏಕಿ ಈ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಹಾಲು ಖರೀದಿಸಲು ನಿರಾಕರಿಸಿದ ಹಿನ್ನೆಲೆ, ಮುಗಳಿ ಗ್ರಾಮದಲ್ಲಿ ರಸ್ತೆಗೆ ಹಾಲು ಸುರಿದು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಮನೆಗೆ ಬಂದು ಹಾಲು ಖರೀದಿಸುತ್ತಿದ್ದರು ಡೈರಿ ಸಿಬ್ಬಂದಿ. ಆದರೆ, ದಿಢೀರ್ ಖರೀದಿಗೆ ನಿರಾಕರಿಸಿದ್ದರಿಂದ ಪ್ರತಿಭಟನೆ ನಡೆಸಿದ್ದಾರೆ. ದಿನಕ್ಕೆ ಸುಮಾರು 10ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು ಎಂದು ತಿಳಿದು ಬಂದಿದೆ.

 

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Milk Farmers ಡೈರಿ ರೈತರು