ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!


11-06-2018 523

ಮಂಗಳೂರು: ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಇದೇ ತಿಂಗಳ ಜೂನ್ ಒಂದರಂದು ಮುಂಜಾನೆ 4 ಗಂಟೆಗೆ ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ. ಮನೆಯ ಹೊರಗಡೆ ಯಾರೋ ಮಾತಾನಾಡುವ ಶಬ್ದ ಕೇಳುತ್ತಿದೆ ನೋಡಿ ಬರುತ್ತೇನೆ ಎಂದು ಹೋದವರು ವಾಪಸ್ ಆಗಿರಲಿಲ್ಲ. ಆದರೆ, ಇಂದು ಬಂಟ್ವಾಳ ತಾಲ್ಲೂಕು  ಶಂಬೂರಿನ ಎಎಂಆರ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಟೈಲರ್ ವೃತ್ತಿ ಮಾಡುತ್ತಿದ್ದ ರಮೇಶ್ ಗೌಡ(45) ಮೃತ ವ್ಯಕ್ತಿ. ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮದ ಅಜಿಲ ನಿವಾಸಿಯಾದ ಈತ ಸಮಾಜಿಕ ಕಾರ್ಯಕರ್ತರಾಗಿ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. 

ನಾಪತ್ತೆಯಾದ ದಿನದಿಂದ ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿರಲ್ಲಿಲ್ಲ. ಭೀತಿಗೊಂಡ ಪತ್ನಿ ಉಷಾ, ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suspect death social worker ನಾಪತ್ತೆ ಟೈಲರ್