ಬೆಂಬಲಿಗರ ಒತ್ತಾಯ: ಜಿಟಿಡಿ ಖಾತೆ ಬದಲಾವಣೆ ಸಾಧ್ಯತೆ?


11-06-2018 411

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಮ್ಮ ಬೆಂಬಲಿಗರಿಗೆ ಸ್ವತಃ ಜಿಟಿಡಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಖಾತೆ ಹಂಚಿಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರಿಗೆ 'ಉನ್ನತ ಶಿಕ್ಷಣ' ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಈ ಖಾತೆಯ ಕುರಿತು ಜಿಟಿಡಿಗೆ ಸಮಾಧಾನವಿರಲಿಲ್ಲ. ಅದೂ ಅಲ್ಲದೆ, ಕೇವಲ 8ನೇ ತರಗತಿಯನ್ನಷ್ಟೇ ಪಾಸು ಮಾಡಿದವರಿಗೆ 'ಉನ್ನತ ಶಿಕ್ಷಣ' ಖಾತೆ ನಿಡಲಾಗಿದೆ ಎಂದು ಸಾಕಷ್ಟು ಜನ ಈ ಕ್ರಮವನ್ನು ವಿರೋಧಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲೂ ಜಿಟಿಡಿ ಇದೇ ಕಾರಣಕ್ಕೆ ಟ್ರೋಲ್ ಆಗಿದ್ದರು.

ಅದೂ ಅಲ್ಲದೆ, ಜಿಟಿಡಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸಹ ಅವರ ಖಾತೆಯನ್ನು ಬದಲಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಜಿಟಿಡಿ, ಖಾತೆ ಬದಲಾಯಿಸುವ ಕುರಿತು ಮೈಸೂರಿನ ಇನ್ಪೋಸಿಸ್ ವಸತಿಗೃಹದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು.


ಒಂದು ಕಮೆಂಟನ್ನು ಬಿಡಿ