ಸಿ.ಎಸ್.ಪುಟ್ಟರಾಜುಗೆ ಸಣ್ಣ ನೀರಾವರಿ: ಬೆಂಬಲಿಗರ ಆಕ್ರೋಶ


09-06-2018 456

ಮಂಡ್ಯ: ಜಿಲ್ಲೆಯ ಪಾಂಡವಪುರದಲ್ಲಿ ಸಿ.ಎಸ್.ಪುಟ್ಟರಾಜು ಅವರ ರಾಜೀನಾಮೆಗೆ ಒತ್ತಾಯಿಸಿ ಜೆಡಿಎಸ್ ಸ್ಥಳೀಯ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಧರ್ಮರಾಜು, ಮುಖಂಡರಾದ ವೈರಮುಡಿಗೌಡ, ಎಸ್.ಮಲ್ಲೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಸ್.ಪುಟ್ಟರಾಜು ಅವರಿಗೆ ಸಾರಿಗೆ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಇದೀಗ ಸಣ್ಣ ನೀರಾವರಿ ಮಂತ್ರಿ ನೀಡಿರುವುದು ಕಾರ್ಯಕರ್ತರಲ್ಲಿ ಅಸಮಧಾನ ಮೂಡಿಸಿದೆ. ಕೊಟ್ಟರೆ ಉನ್ನತವಾದ ಹುದ್ದೆ ಕೊಟ್ಟು ಜಿಲ್ಲಾ ಮಂತ್ರಿ ಸ್ಥಾನ ನೀಡಬೇಕು. ಇಲ್ಲವಾದರೆ ಸಿ.ಎಸ್.ಪುಟ್ಟರಾಜು ಅವರಿಗೆ ಯಾವ ಮಂತ್ರಿಗಿರಿಯೂ ಬೇಡ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

C. S. Puttaraju irrigation ಮಂತ್ರಿಗಿರಿ ರಾಜೀನಾಮೆ