ಸಿಗದ ಬೆಂಬಲ ಬೆಲೆ: ರೈತರಿಂದಲೇ ಬೆಳೆ ನಾಶ


08-06-2018 477

ಬಳ್ಳಾರಿ: ಮಲ್ಲಿಗೆ ಹೂ ಬೆಳೆಗೆ ಬೆಂಬಲ ಬೆಲೆ ಸಿಗದ ಹಿನ್ನೆಲೆ ನೊಂದ ರೈತರು ತಾವು ಬೆಳೆದ ಬೆಳೆಯನ್ನು ತಾವೇ ನಾಶ ಮಾಡಿದ್ದಾರೆ. ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ಹಾಗೂ ವಿನೋಭನಗರದಲ್ಲಿ ಈ ಘಟನೆ ನಡೆದಿದೆ. ವಿನೋಭಗ್ರಾಮದ ರೈತ ಮಹಾಂತೇಶ ಎಂಬುವವರಿಂದ ತನ್ನ 1ಎಕರೆ ತೋಟದಲ್ಲಿ ಬೆಳೆದಿದ್ದ ಮಲ್ಲಿಗೆ ಹೂ ಬೆಳೆಗೆ ಬೆಂಬಲ ಬೆಲೆ ಸಿಗದ ಹಿನ್ನೆಲೆ, ಮನನೊಂದು ಮೇಕೆಗಳಿಂದ ಸ್ವತಃ ತಾವೇ ತೋಟ ನಾಶಗೊಳಿಸಿದ್ದಾರೆ.

ತಾಲ್ಲೂಕಿನಾದ್ಯಂತ 287ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ, ಇದುವರೆಗೂ ನಿಗದಿತ ಮಾರುಕಟ್ಟೆ ರೈತರಿಗೆ ಸಿಕ್ಕಿಲ್ಲ. ಟೆಂಡರ್ ಮೂಲಕ ಮಾರಾಟ ಮಾಡಲಾಗುತ್ತಿತ್ತು, 1ಕೆಜಿಗೆ 400ರೂ. ಇದ್ದ ಮಲ್ಲಿಗೆ ಹೂ ಬೆಳೆ ಇದೀಗ ಕೆಜಿಗೆ 40ರೂ. ಗೆ ಕುಸಿದಿದೆ. ಹೀಗಾಗಿ ಮನನೊಂದ ರೈತರಿಂದ ಸ್ವಯಂ‌ಪ್ರೇರಿತವಾಗಿ ತೋಟಗಳಿಗೆ ಮೇಕೆಗಳನ್ನು ನುಗ್ಗಿಸಿ ಬೆಳೆ ನಾಶಪಡಿಸಿದ್ದಾರೆ. ತೋಟಗಾರಿಕೆ ಇಲಾಖೆ ಹಾಗೂ ಸರ್ಕಾರ ನಿಗದಿತ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Farmers jasmine crop ಬೆಂಬಲ ಬೆಲೆ ತೋಟ