ಶಾಸಕ ರೋಷನ್‍ ಬೇಗ್ ಬೆಂಬಲಿಗರ ಭಾರೀ ಪ್ರತಿಭಟನೆ


07-06-2018 437

ಬೆಂಗಳೂರು: ಶಿವಾಜಿನಗರದ ಶಾಸಕ ರೋಷನ್‍ ಬೇಗ್ ಹಾಗು ಭದ್ರಾವತಿ ಶಾಸಕ ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಗಲಿಗರು ಕೆಪಿಸಿಸಿ ಕಚೇರಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂಭಾಗ ಪ್ರತಿಭಟನೆ ನಡೆಸಿದರು.

ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರನ್ ಅವರ ನೇತೃತ್ವದಲ್ಲಿ ನೂರಾರು ಮಂದಿ ಬೆಂಬಲಿಗರು ಕಾರ್ಯಕರ್ತರು ರೋಷನ್‍ ಬೇಗ್ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿರುವುದಕ್ಕೆ ಪಕ್ಷದ ಹಿರಿಯ ಮುಖಂಡರು ಹಾಗೂ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೋಷನ್‍ ಬೇಗ್ ನಡೆಸಿರುವ ಪಕ್ಷ ಸಂಘಟನೆ ಶಾಸಕರಾಗಿ ಸಲ್ಲಿಸಿರುವ ಸೇವೆ ಕೈಗೊಂಡಿರುವ ಅಭಿವೃದ್ಧಿಗಳು ಪೋಸ್ಟರ್‍ಗಳನ್ನು ಹಿಡಿದು ಖಾಲಿ ಉಳಿದಿರುವ ಸಚಿವ ಸ್ಥಾನಗಳಲ್ಲಿ ರೋಷನ್‍ ಬೇಗ್ ಅವರಿಗೆ ನೀಡಬೇಕು ಇಲ್ಲದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹಲಸೂರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮಾರಿಕುಮಾರ್, ಭಾರತೀನಗರ ವಾರ್ಡ್ ಅಧ್ಯಕ್ಷ ಸುರೇಶ್‍ಬಾಬು, ಮುಖಂಡರಾದ ಕೃಷ್ಣೆಗೌಡ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇನ್ನು ಕುಮಾರಕೃಪ ರಸ್ತೆಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಸೇರಿದ  ಸಂಗಮೇಶ್ ಅವರ ನೂರಾರು ಮಂದಿ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಭದ್ರಾವತಿಯಿಂದ ಬಂದಿದ್ದ ಕಾರ್ಯಕರ್ತರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಖಾಲಿ ಉಳಿದಿರುವ ಸಚಿವ ಸ್ಥಾನಗಳಲ್ಲಿ ಸಂಗಮೇಶ್ ಅವರಿಗೆ ಸ್ಥಾನ ನೀಡಬೇಕು ಇಲ್ಲದಿದ್ದರೆ ಹೋರಾಟ ತೀವ್ರ ಗೊಳಿಸಲಾಗುದು ಎಂದು ಬೆಂಬಲಿಗರು ಎಚ್ಚರಿಕೆ ನೀಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

R. Roshan Baig Shivajinagar ಭದ್ರಾವತಿ ಸಚಿವ ಸ್ಥಾನ