ರೈತರನ್ನು ಕಂಗೆಡಿಸಿದೆ ಮುಂಗಾರು


06-06-2018 457

ಚಿಕ್ಕಮಗಳೂರು: ಬಯಲು ಸೀಮೆ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರು ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಕೋಟ್ಯಾಂತರ ರೂಪಾಯಿ ಬೆಳೆ ನಾಶವಾಗಿದೆ. ಸುಮಾರು 50ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಜಿಲ್ಲೆಯ ಸಖರಾಯಪಟ್ಟಣ, ಕಡೂರು, ಬೀರೂರು ಭಾಗದಲ್ಲಿ ಬೆಳೆದಿದ್ದ ಈರುಳ್ಳಿ, ರಾಗಿ, ಎಲೆ ಕೋಸು, ಟಮೋಟೊ ಬೆಳೆ ನಾಶವಾಗಿದೆ. ಜಮೀನಿನಲ್ಲಿ ನದಿ ನೀರಿನ ಹಾಗೆ ಮಳೆ ನೀರು ನಿಂತಿರುವುದು ರೈತರನ್ನು ಕಂಗೆಡಿಸಿದೆ. ಮಳೆ ನೀರು ಜಮೀನಿನಲ್ಲಿ ನಿಂತ ಹಿನ್ನೆಲೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತರಿಗೆ ಆಸರೆಯಾಗಬೇಕಿದ್ದ ಮುಂಗಾರು ಮಳೆ ನೂರಾರು ರೈತರನ್ನು ಚಿಂತೆಗೀಡುಮಾಡಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Heavy Rain Crop damage ಆಸರೆ ಬಯಲು ಸೀಮೆ