'ಮೈತ್ರಿ ಸರ್ಕಾರದ ಬಗ್ಗೆ ಅನುಮಾನ ಬೇಡ'-ಪರಂ


04-06-2018 489

ಬೆಂಗಳೂರು: ‘ಐದು ವರ್ಷ ಮೈತ್ರಿ ಸರ್ಕಾರ ಪೂರ್ಣಗೊಳಿಸುತ್ತೇವೆ. ಇದರಲ್ಲಿ ಯಾರಿಗೂ‌, ಯಾವುದೇ ಅನುಮಾನ ಬೇಡ’ ಎಂದು ಕೆಪಿಸಿಸಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ನವರು ಎಲ್ಲಿಯವರೆಗೆ ಬೆಂಬಲ ಕೊಡುತ್ತಾರೋ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ನಾ‌ವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಹೈಕಮಾಂಡ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇದರಲ್ಲಿ ಅವರಿಗೆ ಯಾವುದೇ ಅನುಮಾನ ಬೇಡ. ನಾವು ಐದು ವರ್ಷ ಮೈತ್ರಿ ಸರ್ಕಾರ ಪೂರ್ಣಗೊಳಿಸುತ್ತೇವೆ’ ಎಂದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G.Parameshwara KPCC ಮೈತ್ರಿ ಸರ್ಕಾರ ಹೈಕಮಾಂಡ್