ನಿನ್ನೆ ಪಾಠ-ಪ್ರವಚನ ಇಂದು ಮಳೆ ನೀರ ಕಾಟ


02-06-2018 467

ಚಿತ್ರದುರ್ಗ: ನಿನ್ನೆ ರಾತ್ರಿ ಸುರಿದ ಭಾರೀ‌ ಮಳೆಗೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ನಿನ್ನೆಯಷ್ಟೇ ಶಾಲೆ ಪ್ರಾರಂಭವಾಗಿತ್ತು. ಆದರೆ, ಇಂದು ಪಾಠ, ಪ್ರವಚನ ಬಿಟ್ಟು ವಿದ್ಯಾರ್ಥಿಗಳೆಲ್ಲರೂ ಮಳೆ ನೀರನ್ನು ಕೊಠಡಿಗಳಿಂದ ಹೊರ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನ ರಂಗಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಮೇಲ್ಛಾವಣಿ ಶಿಥಿಲಗೊಂಡು ಶಾಲೆಯ ಕೊಠಡಿಗಳ ತುಂಬೆಲ್ಲಾ ಮಳೆ ನೀರು ಸೋರಿಕೆಯಾಗಿದೆ. ಕೊಠಡಿಗಳ ತುಂಬೆಲ್ಲಾ ಮಳೆ ನೀರು ತುಂಬಿಕೊಂಡಿತ್ತು. ಅಭಿವೃದ್ಧಿ ಕಾಣದ ಶಾಲೆ-ಶಾಲಾ ಕೊಠಡಿ ಕಂಡು ಪೋಷಕರು ಆಕ್ರೋಶಗೊಂಡಿದ್ದಾರೆ. ಶಾಲೆಗಳ ಅಭಿವೃದ್ಧಿ ಕಡೆ ಗಮನ ಹರಿಸದ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಹರಿಹಾಯ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Government Rain ಪ್ರಾಥಮಿಕ ಮೇಲ್ಛಾವಣಿ