ಡಿಕೆ ಬ್ರದರ್ಸ್ ಮನೆ ಮೇಲೆ ಸಿಬಿಐ ದಾಳಿ


31-05-2018 513

ಬೆಂಗಳೂರು,ಮೇ.31-ಐನೂರು ಹಾಗೂ 1 ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡ  ಸಮಯದಲ್ಲಿ ಹಣ ವಿನಿಮಯ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹಾಗೂ ಸೋದರ ಸಂಸದ ಡಿಕೆ ಸುರೇಶ್ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದೆ.

ಸಿಬಿಐ ನ್ಯಾಯಾಲಯದಿಂದ ಬುಧವಾರ ಸರ್ಚ್ ವಾರೆಂಟ್ ಪಡೆದಿದ್ದ ಸಿಬಿಐ ಅಧಿಕಾರಿಗಳು ಗುರುವಾರ  ಕನಕಪುರ, ರಾಮನಗರ, ಯಶವಂತಪುರ, ಬಸವನಗುಡಿ, ನೆಲಮಂಗಲ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ದಾರೆ.

ಸರ್ಕಾರಿ ಬ್ಯಾಂಕ್‍ನಲ್ಲಿ ನಡೆದಿದ್ದ 10 ಲಕ್ಷ ಹಣ ಬದಲಾವಣೆ ಕುರಿತು ದಾಳಿ ನಡೆಸಿರುವ ಸಿಬಿಐ, ಸರ್ಕಾರಿ ಬ್ಯಾಂಕ್ ನ ಇಬ್ಬರು ಮ್ಯಾನೇಜರ್ ಗಳ ಮನೆ ಹಾಗೂ ಕಚೇರಿ ಮೇಲೆ, ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಮನೆ ಮೇಲೆ ಕೂಡ ದಾಳಿ ನಡೆಸಿದೆ. 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗೊಳಗಾಗಿರುವ ಎಲ್ಲರೂ ಡಿಕೆ ಸಹೋದರರ ಆಪ್ತರಾಗಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಸದ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರು 11 ಮಂದಿ ಆಪ್ತರ ಮೇಲೆ ಸಿಬಿಐ, ಇಡಿ ಮತ್ತು ಐಟಿ ಮೂಲಕ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ.ಬುಧವಾರ ರಾತ್ರಿಯೇ  ಸರ್ಚ್ ವಾರೆಂಟ್ ಪಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದ ಕೆಲವೇ ಹೊತ್ತಿನಲ್ಲಿ ದಾಳಿ ನಡೆಸಲಾಗಿದೆ.


ಒಂದು ಕಮೆಂಟನ್ನು ಬಿಡಿ