ನಗರಸಭೆ ಕಾರ್ಯಲಯಕ್ಕೆ ಕಸ ತಂದು ಹಾಕಿದ ಸಾರ್ವಜನಿಕರು


31-05-2018 498

ಮೈಸೂರಿನಲ್ಲೊಂದು ಅಚ್ಚರಿ ಹಾಗೂ ಆಕ್ರೋಶದ ಘಟನೆ ನಡೆದಿದೆ. ನಂಜನಗೂಡಿನಲ್ಲಿ‌ ಕಳೆದ 8 ದಿನಗಳಿಂದ ಕಸ ತೆಗೆಯದೇ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಗಬ್ಬು ನಾರುತ್ತಿದ್ದ ಕಸದಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮನೆಯ ಮುಂದಿನ ಕಸವನ್ನ 
ವ್ಯಾನ್‌ನಲ್ಲಿ ತುಂಬಿಕೊಂಡು ಪುರಸಭೆ ಕಚೇರಿಗೆ ತಂದು ಸುರಿದರು. ಜನರ ವರ್ತನೆ ಕಂಡು ಪುರಸಭೆ ಅಧಿಕಾರಿಗಳು ಪೆಚ್ಚಾದರು. ಪುರಸಭೆ ಬಾಗಿಲ ಮುಂದೆಯೇ ಕಸ ಸುರಿದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಕಸ‌ ತಂದು ಹಾಕಿದ ಹಿನ್ನಲೆ‌ ಐವರನ್ನ ವಶಕ್ಕೆ ಪಡೆದರು. ನಂಜನಗೂಡು ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಿಸಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

garbage municipal office ಪೌರಕಾರ್ಮಿಕರು ಮೈಸೂರು