ರೇಪ್ ಅಂಡ್ ಮರ್ಡರ್: ಸೈಕೋ ಕಿಲ್ಲರ್ ದೊರೆ ಬಂಧನ


30-05-2018 439

ರಾಮನಗರ: ತಮಿಳುನಾಡು ಮೂಲದ ಸೈಕೋ ಕಿಲ್ಲರ್ ನನ್ನು ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ ಬಂದಿಸಿದ್ದಾರೆ. ಬಂಧಿತ ಆರೋಪಿ ತಮಿಳುನಾಡು ಮೂಲದ ದೊರೆ ಅಲಿಯಾಸ್ ಕತ್ತಲರಾಜ್ (50) ಎಂದು ಗುರುತಿಸಲಾಗಿದೆ. 8ಕ್ಕೂ ಹೆಚ್ಚು ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧಿಸಲಾಗಿದೆ.

ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ದೊರೆ, ಅವರನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬ್ಯಾಡರಹಳ್ಳಿ, ಪೀಣ್ಯಾ, ಯಶವಂತಪುರ ಸೇರಿದಂತೆ ಅನೇಕ ಕಡೆಗಳಲ್ಲಿ ರೇಪ್ ಅಂಡ್ ಮರ್ಡರ್ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ. ರಾಮನಗರ ಎಸ್.ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

psycho killer Arresterd ಟಾರ್ಗೆಟ್ ವಿಚಾರಣೆ