ಗೂಡ್ಸ್ ವಾಹನ ಪಲ್ಟಿ: ಬದುಕುಳಿದ ಚಾಲಕ


30-05-2018 445

ಬೆಂಗಳೂರು: ಗೊರಗುಂಟೆ ಪಾಳ್ಯದ ಮಾರ್ಡನ್ ಬ್ರೀಡ್ ಫ್ಯಾಕ್ಟರಿ ಬಳಿ ರೇಷ್ಮೆ ಗೂಡು  ತುಂಬಿಕೊಂಡು ತೆರಳುತ್ತಿದ್ದ ಗೂಡ್ಸ್ ವಾಹನ ಉರುಳಿಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಾಹನದಲ್ಲಿ ರೇಷ್ಮೆ ಗೂಡನ್ನ ತುಂಬಿಕೊಂಡು ಶಿಡ್ಲಘಟ್ಟದಿಂದ ರಾಮನಗರಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಗೊರಗುಂಟೆ ಪಾಳ್ಯದ ಮಾರ್ಡನ್ ಬ್ರೀಡ್ ಫ್ಯಾಕ್ಟರಿ ಬಳಿ ತಿರುವು ತೆಗೆದುಕೊಳ್ಳುವ ವೇಳೆ ಮರದ ಕೊಂಬೆಗೆ ತಗುಲಿ ವಾಹನ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Silk Goods ಪ್ರಾಣಾಪಾಯ ಸಂಚಾರ