‘ಸಿದ್ದು ಅಹಂಕಾರವನ್ನ ಜನ ಚೂರುಚೂರು ಮಾಡಿದ್ದಾರೆ’- ಎಸ್.ಆರ್ ಹಿರೇಮಠ


29-05-2018 391

ಹುಬ್ಬಳ್ಳಿ: ರಾಜ್ಯದ 'ಭ್ರಷ್ಟಾಚಾರ ನಿಗ್ರಹದಳ'ವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದರು. ನಾಚಿಕೆಗೇಡಿತನದಿಂದ ಲೋಕಾಯುಕ್ತಕ್ಕಿರುವ ಗೌರವವನ್ನೇ ಹಾಳು ಮಾಡಿದರು ಎಂದು, ಸಾಮಾಜಿಕ ಹೋರಾಟಗಾರ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಕಿಡಿಕಾರಿದ್ದಾರೆ. 

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಮಾತಿಗೊಮ್ಮೆ ಅಪ್ಪ-ಮಕ್ಕಳ ಪಕ್ಷ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಅವರನ್ನೂ ವ್ಯಂಗ್ಯವಾಡಿದ್ದಾರೆ. ನಿಮಗೆ ಅಧಿಕಾರ ಬೇಕೇ ಹೊರತು ಜನರ ಸಮಸ್ಯೆಗೆ ಪರಿಹಾರವಲ್ಲ. ಕರ್ನಾಟಕದ ಎಸಿಬಿಯನ್ನು ನಿರ್ಮೂಲನೆ ಮಾಡೋ ವಿಚಾರ ನಿಮ್ಮ ಪ್ರಣಾಳಿಕೆಯಲ್ಲಿದೆ. ನಿರ್ಮೂಲನ ಮಾಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ, ಆ ಕುರಿತ ಎಲ್ಲಾ ದಾಖಲೆಗಳನ್ನು ತಮಗೂ ಒದಗಿಸುತ್ತೇವೆ ಎಂದರು.

'ಸಿದ್ದರಾಮಯ್ಯನ ಅಹಂಕಾರವನ್ನು ಜನ ಚೂರುಚೂರು ಮಾಡಿದ್ದಾರೆ. ನೀವು ಅರ್ಥೈಸಿಕೊಳ್ಳಿ ಲೋಕಾಯುಕ್ತವನ್ನು ಬಲಪಡಿಸಿ' ಎಂದು ಸಿಎಂ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಅಂತಾ ಹೇಳಿ ನುಣುಚಿಕೊಳ್ಳುವುದು ಸಿಎಂಗೆ ತರವಲ್ಲ. ಸೋನಿಯಾ ಗಾಂಧಿಯವರೊಂದಿಗೆ ಈ ಬಗ್ಗೆ ಮಾತನಾಡಬೇಕು, ಒಪ್ಪಿದರೆ ಮೈತ್ರಿ ಮುಂದುವರಿಯಬೇಕು ಇಲ್ಲವಾದರೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ, ಸಂತೋಷ್ ಲಾಡ್, ಅನಿಲ್ ಲಾಡ್ ಅವರನ್ನ ಜೈಲಿಗೆ ಕಳುಹಿಸಲಾಗುವುದು ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

S.R.Hiremath siddaramaiah ಮಾಜಿ ಸಚಿವ ಲೋಕಾಯುಕ್ತ