ಹಸಿರು ಶಾಲು ಹಾಕುವುದು ಬಿಎಸ್ ವೈಗೆ ಫ್ಯಾಷನ್: ತೀ.ನಾ.ಶ್ರೀನಿವಾಸ್


29-05-2018 462

ಶಿವಮೊಗ್ಗ: ರೈತರ ಬಗ್ಗೆ ಬಿಜೆಪಿ ಹಾಗೂ ಯಡಿಯೂರಪ್ಪನವರಿಗೆ ಕಾಳಜಿ ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕರೆ ನೀಡಿದ್ದ ರಾಜ್ಯ ಬಂದ್ ವಿಫಲವಾಗಿದೆ. ಯಡಿಯೂರಪ್ಪನವರಿಗೆ ಹಸಿರು ಶಾಲು ಹಾಕುವುದು ಫ್ಯಾಷನ್ ಆಗಿದೆ ಎಂದು ಟೀಕೆ ಮಾಡಿದ್ದಾರೆ.

ಬಿಎಸ್ ವೈ ಸಿಎಂ ಅದಾಗ ರೈತರ ಸಾಲಮನ್ನಾ ಮಾಡಲು ವಿಫಲರಾಗಿ, ಈಗ ಸಾಲಮನ್ನಾ ಮಾಡಿ ಎನ್ನುತ್ತಿರುವುದು ಎಷ್ಟು ಸರಿ. ಸದನದಲ್ಲಿ ಬಿಎಸ್ ವೈ ಒಂದು ದಿನ ರೈತರ ಬಗ್ಗೆ ಧ್ವನಿ ಎತ್ತಲಿಲ್ಲ. ಕೇಂದ್ರ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸದೆ, ಈಗ ಕುಮಾರಸ್ವಾಮಿರವರ ಸಾಲ ಮನ್ನಾ ಕುರಿತು ಮಾತನಾಡುತ್ತಿದ್ದಾರೆ ಎಂದು ದೂರಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.D.Kumaraswamy farmers ವಿಫಲ ಸಾಲಮನ್ನಾ