ವಿವಿ ಪರೀಕ್ಷೆ: ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿಗಳು


29-05-2018 435

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ರಾಜರಾಜೇಶ್ವರಿ ನಗರ ಚುನಾವಣೆ ಹಿನ್ನೆಯಲ್ಲಿ ವಿಶ್ವವಿದ್ಯಾಲಯವು ಮೇ 28ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮೇ 30ರಂದು ನಡೆಸಲಾಗುವುದು ಎಂದು ಪ್ರಕಟಣೆ ಹೊರಡಿಸಿತ್ತು. ಆದರೆ, ಮೇ 30ರಂದು ನಡೆಯಬೇಕಿರುವ ಪರೀಕ್ಷೆಯನ್ನು ಸಹ ಮುಂದೂಡಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಂಗಾಲಾಗಿದ್ದಾರೆ.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶಿವರಾಜು ಅವರ ಸಹಿಯನ್ನು ಫೋರ್ಜರಿ ಮಾಡಿರುವ ಕಿಡಿಗೇಡಿಗಳು ಗೊಂದಲದ ಹೇಳಿಕೆಯನ್ನು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಸುದ್ದಿ ಸುಳ್ಳು, ನಿಗದಿಸಿರುವ ಸಮಯದಲ್ಲೇ ಪರೀಕ್ಷಗಳು ನಡೆಯಲಿವೆ ಎಂದು ವಿವಿ ತಿಳಿಸಿದೆ. ಮತ್ತು ಈ ಪ್ರಕರಣದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ವಿವಿ ಮಂಡಳಿ ಹೇಳಿದೆ.


ಒಂದು ಕಮೆಂಟನ್ನು ಬಿಡಿ