ಶಾಲಾ ಶುಲ್ಕವೋ ಲೂಟಿಯೋ?


29-05-2018 486

ಬೆಂಗಳೂರು: ಶಾಲಾ ಶುಲ್ಕ ಹೆಚ್ಚಳ ಖಂಡಿಸಿ ಶಾಲೆಯ ಎದುರು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಕಸ್ತೂರಿನಗರ ಬಳಿಯ ಎನ್.ಜಿ.ಇ.ಎಫ್ ಲೇಔಟ್ ನಲ್ಲಿರುವ ಪ್ರೆಸಿಡೆನ್ಸಿ ಶಾಲೆ ಎದುರು ಪೋಷಕರು ಪ್ರತಿಭಟಿಸಿದ್ದಾರೆ. ವಾರ್ಷಿಕ ಶಾಲಾ‌ ಶುಲ್ಕ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಹೆಚ್ಚಿಸುತ್ತಿರುವುದನ್ನು ಖಂಡಿಸಿ ನೂರಾರು ಪೋಷಕರು ಶಾಲೆಯ ಎದುರು ಪ್ರತಿಭಟನೆಗಿಳಿದಿದ್ದರು.

ಪ್ರತಿವರ್ಷ ಹತ್ತು ಸಾವಿರ ಹೆಚ್ಚಿಸುತ್ತಿರುವ ಶಾಲಾ ಆಡಳಿತ ಮಂಡಳಿ, ಕಳೆದ ವರ್ಷಕ್ಕಿಂತ ಹತ್ತು ಸಾವಿರ ಹೆಚ್ಚಿಸಿ ಈ ಬಾರಿ ವಾರ್ಷಿಕ ಶುಲ್ಕ 41 ಸಾವಿರಕ್ಕೆ ಹೆಚ್ಚಿಸಿದೆ. ಇದನ್ನು ಪೋಷಕರು ತೀವ್ರವಾಗಿ ಖಂಡಿಸಿದ್ದಾರೆ. ಶಾಲಾ ಅಭಿವೃದ್ದಿ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿದೆ. ಇನ್ನು ಹೆಚ್ಚುವರಿ ಶುಲ್ಕದ ಬಗ್ಗೆ ಪ್ರಶ್ನೆ ಮಾಡಿದರೆ ಪೋಷಕರ ಸ್ಯಾಲರಿ ಸ್ಲಿಪ್ ಕೇಳುತ್ತಿದೆ ಆಡಳಿತ ಮಂಡಳಿ, ಪೋಷಕರು ಕೆಲಸ ಮಾಡುವ ಕಂಪನಿಯ ಸ್ಯಾಲರಿ ಸ್ಲಿಪ್ ಕೊಡಿ ಎಂದು ಆಡಳಿತ ಮಂಡಳಿ ಒತ್ತಾಯಿಸಿದೆ. ಆದರೆ, ಇದನ್ನು ಪೋಷಕರು ತೀವ್ರವಾಗಿ ವಿರೋಧಿಸಿ ಶಾಲೆ ಮುತ್ತಿಗೆಗೆ ಯತ್ನಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ